ವಿಜಯಪುರ:– ಜಿಲ್ಲೆಯ ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮವನ್ನು ನೂತನ ಆಲಮೇಲ ತಾಲೂಕಿಗೆ ಸೇರ್ಪಡೆ ಹಿನ್ನಲೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಸಿಂದಗಿ ತಾಲೂಕಿನ ಗಬಸಾವಳಗಿ ಗ್ರಾಮವನ್ನು ಸಿಂದಗಿ ಇಂದ ಬೇರ್ಪಡಿಸಿ ನೂತನ ಆಲಮೇಲ ತಾಲೂಕಿಗೆ ಅಧಿಕಾರಿಗಳು ಸೇರ್ಪಡೆ ಮಾಡಿದ್ದಾರೆ. ಇದೀಗ ಅಧಿಕಾರಿಗಳ ನಡೆಗೆ ಗ್ರಾಮಸ್ಥರು ಆಕ್ರೋಶ ಹೊರ ಹಾಕಿದ್ದಾರೆ.
ಕೇವಲ 12 ಕಿಲೋ ಮೀಟರ್ ದೂರ ಇರುವ ಸಿಂದಗಿಯಿಂದ ತಗೆದ 40 ಕಿಲೋ ಮೀಟರ್ ದೂರದ ಆಲಮೇಲ ತಾಲೂಕಿಗೆ ಸೇರಿಸಿದ್ದಾರೆ. ಇದು ಅಧಿಕಾರಿಗಳ ಹಾಗೂ ಜನಪ್ರತಿನಿಧಿಗಳು ಬೇಕಂತಲೇ ತಾರತಮ್ಯ ಮಾಡುತ್ತಿದ್ದಾರೆ ಎಂದು ಆಕ್ರೋಶ ಹೊರ ಹಾಕಿದ್ದಾರೆ.
ಮೊದಲಿನ ಹಾಗೆ ಸಿಂದಗಿ ತಾಲೂಕಿನಲ್ಲೇ ಗಬಸಾವಳಗಿ ಗ್ರಾಮ ಮುಂದು ವರೆಸುವಂತೆ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ. ಇರದಿದ್ದರೆ ಮುಂಬರುವ ದಿನಗಳಲ್ಲಿ ಉಗ್ರ ಹೋರಾಟ ಮಾಡುವ ಎಚ್ಚರಿಕೆಯನ್ನು ಗ್ರಾಮಸ್ಥರು ನೀಡಿದ್ದಾರೆ.