ಯಲಹಂಕ: ಬೆಂಗಳೂರು ಉತ್ತರ ತಾಲ್ಲೂಕು ಯಲಹಂಕ ವಿಧಾನಸಭಾ ಕ್ಷೇತ್ರ ದಾಸನಪುರ ಹೋಬಳಿಯ ತುಮಕೂರು ರಸ್ತೆ ಮಾದನಾಯಕನಹಳ್ಳಿ ಯಿಂದ ಕಡಬಗೆರೆ ಮತ್ತು ಕಾಚೋಹಳ್ಳಿ ಮಾರ್ಗವಾಗಿ ಸುಮಾರು 700 ಎಲ್ಇಡಿ ಲೈಟ್ಗಳನ್ನು ಎರಡು ಹೈ ಮಾಸ್ಕ್ ಲೈಟ್ ಗಳಿಗೆ ಶಾಸಕ ಎಸ್. ಆರ್.ವಿಶ್ವನಾಥ್ ಚಾಲನೆ ನೀಡಿದರು
ನಂತರ ಮಾತನಾಡಿದ ಅವರು, ತುಮಕೂರು ಮುಖ್ಯ ರಸ್ತೆ ಮಾದನಾಯಕನಹಳ್ಳಿ ಯಿಂದ ಕಡಬಗೆರೆ ಮತ್ತು ಕಾಚೋಹಳ್ಳಿ ಮಾರ್ಗವಾಗಿ ಸುಮಾರು 700 ಎಲ್ ಇ ಡಿ ಲೈಟ್ಗಳು ಎರಡು ಹೈ ಮಾಸ್ಕ್ ಲೈಟ್ಗಳನ್ನು ಉದ್ಘಾಟನೆ ಮಾಡಿದ್ದು ಈ ಹಿಂದೆ ಬಿಡಿಎ ಇಂದ ರಸ್ತೆ ಅಗಲೀಕರಣ ಮಾಡಿದ್ದೇವೆ ಬಹಳ ಸುಂದರವಾಗಿ ಈ ರಸ್ತೆ ಯಾಗಿದೆ ಸಾಕಷ್ಟು ಜನಗಳಿಗೆ ಅನುಕೂಲವಾಗಿದೆ,ರಸ್ತೆ ಅಗಲೀಕರಣಕ್ಕೆ ಸಹಕರಿಸಿದ ಮಾಲೀಕರಿಗೆ ಧನ್ಯವಾದಗಳು, ಹಾಗೆ ಈ ಬಾಗದಲ್ಲಿ ರಾತ್ರಿ ವೇಳೆ ಸಾಕಷ್ಟು ಜನ ಓಡಾಡುತ್ತಿದ್ದು ಕತ್ತಲಿತ್ತು ಜನರು ಲೈಟ್ ಗಾಗಿ ಮನವಿ ಮಾಡಿದ್ದರು ನಂತರ ಟೆಂಡರ್ ಮಾಡಿ ಕಾಮಗಾರಿ ಇಂದು ಮುಗಿದಿದ್ದು ಇಂದು ಇದಕ್ಕೆ ಚಾಲನೆ ನೀಡಿದ್ದೇವೆ ಈ ಒಂದು ಲೈಟ್ಗಳನ್ನು ಒಂದು ವರ್ಷಗಳ ಕಾಲ ಗುತ್ತಿಗೆದಾರರೇ ನಿರ್ವಹಣೆ ಮಾಡಬೇಕು, ಹಾಗೆ ಇಂದು ಚಾಲನೆ ನೀಡಿದ ಮೇಲೆ ಕೆಲವು ಲೈಟ್ಗಳು ಉರಿಯುತ್ತಿಲ್ಲ ಅದನ್ನೆಲ್ಲ ಮೂರು ನಾಲ್ಕು ದಿನಗಳಲ್ಲಿ ಸರಿ ಮಾಡುತ್ತಾರೆ,
ಗ್ರಾಮೀಣ ಪ್ರದೇಶದಲ್ಲಿ ಇಷ್ಟು ದೊಡ್ಡ ರಸ್ತೆಗೆ ಇಷ್ಟೊಂದು ಎಲ್ಇಡಿ ಲೈಟ್ಗಳನ್ನು ಅಳವಡಿಸಿರುವುದು ಇದು ಮೊದಲನೇ ಬಾರಿ ಹಾಕಿರತಕ್ಕಂತಹದ್ದು ಗ್ರಾಮೀಣ ಪ್ರದೇಶದಲ್ಲಿ ಗ್ರಾಮನೂ ಕೂಡ ನಗರದಂತೆ ಕಾಣಬೇಕು ಎಂದು ನನ್ನ ಉದ್ದೇಶ ಇರೋದು ತಡಕೊಳ್ಳೋಕೆ ಆಗಾಗಿ ಇಂದು ಮೂರು ಕಡೆ ಪೂಜೆ ಇಟ್ಟುಕೊಂಡು ಲೋಕಾರ್ಪಣೆ ಮಾಡಿದ್ದೇವೆ ಎಂದು ತಿಳಿಸಿದರು,
ಇದೆ ವೇಳೆ ಮಂಡಲ ಅಧ್ಯಕ್ಷ ಹನುಮಯ್ಯ,ನಗರಸಭೆ ಆಯುಕ್ತ,ಕೃಷ್ಣ ಮೂರ್ತಿ,ಜಿ.ಜೆ,ಮೂರ್ತಿ,ಉಮೇಶ್,ಉದ್ದಂಡಯ್ಯ,ರಾಮಕೃಷ್ಣಯ್ಯ,ಪುನೀತ್,ಆಕಾಶ್ ಗೌಡ,ಮುಕೇಶ್,ಮತ್ತು ಬಿಜೆಪಿ ಮುಖಂಡರು ಕಾರ್ಯಕರ್ತರು ಮತ್ತಿತರರುಇದ್ದರು,,