ಬಳ್ಳಾರಿ: ರಾಜ್ಯಾಧ್ಯಕ್ಷ ಸ್ಥಾನಕ್ಕೆ ವಿಜಯೇಂದ್ರ ನೇಮಕ ಭ್ರಷ್ಟಾಚಾರಕ್ಕೆ ಪೂರಕ ಎಂದು ಉಗ್ರಪ್ಪ ಹೇಳಿದ್ದಾರೆ.

ಮಾಜಿ ಮುಖ್ಯಮಂತ್ರಿ ಬಿ.ಎಸ್‌.ಯಡಿಯೂರಪ್ಪ ಅವರು ರಾಜ್ಯ ರಾಜಕಾರಣದ ಆಧುನಿಕ ಧೃತರಾಷ್ಟ್ರನಿದ್ದಂತೆ. ಒಬ್ಬ ಮಗನನ್ನು ಸಂಸದರನ್ನಾಗಿ ಮಾಡಿ, ಮತ್ತೂಬ್ಬ ಮಗನನ್ನು ಶಾಸಕನಾಗದಿದ್ದರೂ ಸಚಿವನಾಗಿಸಲು ಪ್ರಯತ್ನಿಸಿ, ಈಗ ರಾಜ್ಯಾಧ್ಯಕ್ಷರನ್ನಾಗಿ ಮಾಡಿ ಧೃತರಾಷ್ಟ್ರ ಪ್ರೇಮ ಮೆರೆದಿದ್ದಾರೆ

ಯಡಿಯೂರಪ್ಪ ಅವ ಧಿಯಲ್ಲಿ ಬಿ.ವೈ.ವಿಜಯೇಂದ್ರ ಅಧಿ ಕಾರ ದುರ್ಬಳಕೆ ಮಾಡಿಕೊಂಡಿದ್ದಾರೆ. ದೇಶದ ರಕ್ಷಕ, ಚೌಕಿದಾರ್‌ ಎಂದೆಲ್ಲ ಹೇಳಿಕೊಳ್ಳುವ ಪ್ರಧಾನಿ ಮೋದಿ ಭ್ರಷ್ಟಾಚಾರದ ಆರೋಪ ಹೊತ್ತಿರುವ ಬಿ.ವೈ.ವಿಜಯೇಂದ್ರ ಅವರನ್ನು ರಾಜ್ಯಾಧ್ಯಕ್ಷ ಸ್ಥಾನದಿಂದ ಬದಲಿಸಬೇಕು. ಇಲ್ಲದಿದ್ದರೆ ವಿಜಯೇಂದ್ರ ನೇಮಕ ಭ್ರಷ್ಟಾಚಾರಕ್ಕೆ ಪೂರಕವಾಗಿದೆ ಎಂದು ಜನ ಭಾವಿಸುತ್ತಾರೆ ಎಂದು ಹೇಳಿದ್ದಾರೆ.

Share.