ಹೊಳೆನರಸೀಪುರ: ಶಿವಮೊಗ್ಗ ಲೋಕಸಭಾ ಕ್ಷೇತ್ರದಲ್ಲಿ ಪಕ್ಷೇತರವಾಗಿ ರ್ಸ್ಪಸಿರುವ ಮಾಜಿ ಉಪಮುಖ್ಯಮಂತ್ರಿ ಈಶ್ವರಪ್ಪ ವಿರುದ್ಧ ಪಕ್ಷ ಏನು ಶಿಸ್ತು ಕ್ರಮ ಕೈಗೊಳ್ಳಬೇಕೋ ಅದನ್ನು ತೆಗೆದುಕೊಳ್ಳಲಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ. ವಿಜಯೇಂದ್ರ ಹೇಳಿದರು. ಸುದ್ದಿಗಾರರೊಂದಿಗೆ ಮಾತನಾಡಿ, “ಅವರು ಎಷ್ಟು ಅಪಾದಿಸುತ್ತಾರೋ, ಅಷ್ಟೂ ಮತಗಳನ್ನು ರಾಘವೇಂದ್ರ ಅವರಿಗೆ ತಂದುಕೊಡುತ್ತದೆ.
ಒಬ್ಬ ಸಂಸದನಾಗಿ ಬಿ.ವೆ‘.ರಾಘವೇಂದ್ರ ಶಿವಮೊಗ್ಗ ಕ್ಷೇತ್ರದಲ್ಲಿ ಏನೆಲ್ಲಾ ಅಭಿವೃದ್ದಿ ಮಾಡಿದ್ದಾರೆ. ಈಶ್ವರಪ್ಪ ರಾಜ್ಯದ ಉಪಮುಖ್ಯಮಂತ್ರಿಯಾಗಿ ಶಿವಮೊಗ್ಗಕ್ಕೆ ನೀಡಿದ ಕೊಡಗೆ ಏನು ಎಂಬುದು ಅಲ್ಲಿನ ಮತದಾರರಿಗೆ ಗೊತ್ತಿದೆ. ಸುಮಾರು ೨ ಲಕ್ಷ ಅಂತರದಿಂದ ರಾಘವೇಂದ್ರ ಅವರು ಗೆಲ್ಲಲಿದ್ದಾರೆ’’ ಎಂಬ ವಿಶ್ವಾಸ ವ್ಯಕ್ತಪಡಿಸಿದರು.
ನಿಮ್ಮ ಮನೆಯಲ್ಲಿ ಇರುವೆಗಳ ಕಾಟವೇ.? ಸುಲಭವಾಗಿ ಹೋಗಲಾಡಿಸಲು ಇಲ್ಲಿದೆ ಸಿಂಪಲ್ ಟಿಪ್ಸ್
“ಬೆಂಗಳೂರು ಗ್ರಾಮಾಂತರ ಕ್ಷೇತ್ರದಲ್ಲಿ ಸಜ್ಜನ ವೈದ್ಯ ಡಾ.ಮಂಜುನಾಥ್ ಗೆಲುವು ಸಾಧಿಸಲಿದ್ದಾರೆ. ಕಾಂಗ್ರೆಸ್ನವರು ಸೋಲಿನ ಭೀತಿಯಿಂದ ಒಬ್ಬರಲ್ಲ. ನಾಲ್ಕು ಮಂದಿ ಡಾ.ಮಂಜುನಾಥ್ ಹೆಸರಿನವರನ್ನು ಹುಡುಕಿ ಚುನಾವಣೆಗೆ ಸ್ಪರ್ಧಿಯನ್ನಾಗಿ ಮಾಡಿಕೊಂಡಿದ್ದಾರೆ. ಆದರೆ ಜನ ಬಹಳ ಬುದ್ದಿವಂತರಿದ್ದಾರೆ’’ ಎಂದರು.