ಬೆಂಗಳೂರು: ದೀಪಾವಳಿ ಕೊಡುಗೆಯಾಗಿ ವಿಜಯೇಂದ್ರಗೆ ಬಿಜೆಪಿ ರಾಜ್ಯಾಧ್ಯಕ್ಷ ಪಟ್ಟ ಸಿಕ್ಕಿದೆ. 5 ದಶಕಗಳ ಕಾಲ ಯಡಿಯೂರಪ್ಪನವರು ಪಕ್ಷ ಸಂಘಟನೆ ಮಾಡಿದ್ದಾರೆ. ಯಡಿಯೂರಪ್ಪನವರ ಮಾರ್ಗದರ್ಶನ ಬಿ.ವೈ.ವಿಜಯೇಂದ್ರ ಪಡೆದಿದ್ದಾರೆ.
ಸೋಮಣ್ಣ, ಸಿ.ಟಿ.ರವಿ, ಅಶೋಕ್, ಅಶ್ವತ್ಥ್ ನಾರಾಯಣ್ ರೇಸ್ನಲ್ಲಿದ್ರು. ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಅತಿ ಹೆಚ್ಚು ಸ್ಥಾನ ಗೆಲ್ಲುತ್ತೇವೆ. ಲಿಂಗಾಯತ ಸಮಾಜ 100ಕ್ಕೆ 90 ಪರ್ಸೆಂಟೇಜ್ ಬಿಜೆಪಿ ಪರ ಇದ್ದಾರೆ. ವೀರಶೈವ-ಲಿಂಗಾಯತರನ್ನು ಒಡೆಯುವ ಕುತಂತ್ರ ಕಾಂಗ್ರೆಸ್ ಮಾಡಿತ್ತು. ಲಿಂಗಾಯತರು ಬೇರೆ, ವೀರಶೈವರು ಬೇರೆ ಅನ್ನೋ ಕುತಂತ್ರ ಮಾಡಿತ್ತು ಎಂದು ಬೆಂಗಳೂರಿನಲ್ಲಿ ಕಾಂಗ್ರೆಸ್ ವಿರುದ್ಧ ಮುರುಗೇಶ್ ನಿರಾಣಿ ತೀವ್ರ ವಾಗ್ದಾಳಿ ನಡೆಸಿದ್ದಾರೆ.