ಬಳ್ಳಾರಿ: ರೇಣುಕಾಸ್ವಾಮಿ ಕೊಲೆ ಕೇಸ್ನಲ್ಲಿ ನಟ ದರ್ಶನ್ ಸೇರಿದಂತೆ ಎಲ್ಲಾ ಆರೋಪಿಗಳ ಪಾತ್ರವನ್ನು ತನಿಖೆಯಲ್ಲಿ ಪೊಲೀಸರು ದೃಢಪಡಿಸಿದ್ದಾರೆ. ದರ್ಶನ್ ಈ ಕೇಸ್ನಲ್ಲಿ A2 ಆರೋಪಿಯಾಗಿದ್ದು, ದರ್ಶನ್ ವಿರುದ್ಧದ ಇಂಚಿಂಚೂ ಸಾಕ್ಷ್ಯಗಳನ್ನು ನಮೂದಿಸಿದ್ದಾರೆ.
ಇನ್ನೂ ರೇಣುಕಾಸ್ವಾಮಿ ಕೊಲೆ ಪ್ರಕರಣದ ಜಾರ್ಜ್ ಶೀಟ್ ಸಲ್ಲಿಕೆ ಬೆನ್ನಲ್ಲೇ ದರ್ಶನ್ ಭೇಟಿಗೆ ಇಂದು ಪತ್ನಿ ವಿಜಯಲಕ್ಷ್ಮಿ ಮತ್ತೆ ಬಳ್ಳಾರಿ ಜೈಲಿಗೆ ಬರಲಿದ್ದಾರೆ. ಸಂಜೆ 4.30ಕ್ಕೆ ಬರುವುದಾಗಿ ವಿಜಯಲಕ್ಷ್ಮಿ ಅವರು ಜೈಲು ಸಿಬ್ಬಂದಿಗೆ ಮಾಹಿತಿ ನೀಡಿದ್ದಾರೆ.
ಡಯಟ್, ವ್ಯಾಯಾಮ ಯಾವುದೂ ಇಲ್ಲದೇ ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ? ಇಲ್ಲಿವೆ ಸಿಂಪಲ್ ಟಿಪ್ಸ್
ಸಂಜೆ 4.30 ರಿಂದ 5.30ರ ವರೆಗೆ ಜೈಲಿನಲ್ಲಿರುವ ಖೈದಿಗಳ ಸಂದರ್ಶನಕ್ಕೆ ಭೇಟಿಯ ಸಮಯವಿರುತ್ತದೆ. ಹೀಗಾಗಿ ನಿಯಮಗಳ ಪ್ರಕಾರ ಒಬ್ಬ ಕೈದಿ ಆರ್ಧ ಗಂಟೆ ಸಂಬಂಧಿಕರ ಜೊತೆಗೆ ಮಾತನಾಡಬಹುದು. ಹೀಗಾಗಿ ಆರೋಪಿ ದರ್ಶನ್ ಪತ್ನಿಯೂ ಅದೇ ಸಮಯದಲ್ಲಿ ಬರಲಿದ್ದಾರೆ.