ಖ್ಯಾತ ಬಾಲಿವುಡ್ ನಟ ಮತ್ತು ಚಲನಚಿತ್ರ ನಿರ್ಮಾಪಕ ದೇಬ್ ಮುಖರ್ಜಿ ಶುಕ್ರವಾರ ಮುಂಬೈನಲ್ಲಿ ನಿಧನರಾದರು. ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾಗ ತಮ್ಮ 83 ನೇ ವಯಸ್ಸಿನಲ್ಲಿ ಕೊನೆಯುಸಿರೆಳೆದರು. ಅವರು “ಏಕ್ ಬಾರ್ ಮೂಷ್ಕುರಾ ದೋ” ಮತ್ತು “ಜೋ ಜೀತಾ ವೋಹಿ ಸಿಕಂದರ್” ನಂತಹ ಚಿತ್ರಗಳಿಗೆ ಹೆಸರುವಾಸಿಯಾಗಿದ್ದಾರೆ. ಅವರ ಮಗ ಅಯಾನ್ ಮುಖರ್ಜಿ ಪ್ರಸಿದ್ಧ ನಿರ್ದೇಶಕ. ಅವರ ನಿಧನಕ್ಕೆ ಬಾಲಿವುಡ್ ಚಿತ್ರರಂಗ ಶೋಕ ವ್ಯಕ್ತಪಡಿಸಿದೆ.
ದೇಬ್ ಮುಖರ್ಜಿ, ಬಾಲಿವುಡ್ನ ಕಲ್ಟ್ ಕ್ಲಾಸಿಕ್ ಸಿನಿಮಾಗಳಾದ ‘ಅಭಿನೇತ್ರಿ’, ‘ಏಕ್ ಬಾರ್ ಮುಸ್ಕುರಾದೊ’, ‘ಆಸೂ ಬನ್ ಗಯೇ ಪೂಲ್’ ಇನ್ನೂ ಕೆಲವು ಸಿನಿಮಾಗಳಲ್ಲಿ ನಟಿಸಿದ್ದಾರೆ. 2009 ರಲ್ಲಿ ಬಿಡುಗಡೆ ಆದ ಶಾಹಿದ್ ಕಪೂರ್ ನಟನೆಯ ‘ಕಮೀನೆ’ ಅವರ ಕೊನೆಯ ಸಿನಿಮಾ. ಅದಾದ ಬಳಿಕ ಅವರು ಸಿನಿಮಾ ರಂಗದಿಂದ ದೂರವೇ ಉಳಿದಿದ್ದರು.
ಭಾರತದ ಮೊದಲ ಸಸ್ಯಾಹಾರಿ ರೈಲು..! ಇಲ್ಲಿ ಶುದ್ಧ ಸಸ್ಯಾಹಾರಿ ಆಹಾರ ಮಾತ್ರ ಲಭ್ಯ – No non-veg
ದೇಬ್ ಮುಖರ್ಜಿ ಅವರದ್ದು ಬಹುದೊಡ್ಡ ಸಿನಿಮಾ ಕುಟುಂಬ. ದೇಬ್ ಮುಖರ್ಜಿ ಅವರ ಕುಟುಂಬ ಭಾರತದಲ್ಲಿ ಸಿನಿಮಾ ಪ್ರಾರಂಭ ಆದಾಗಿನಿಂದ ಈಗಿನ ವರೆಗೆ ಚಿತ್ರರಂಗದೊಡನೆ ಗುರುತಿಸಿಕೊಂಡಿದೆ. ದೇಬ್ ಮುಖರ್ಜಿ ಅವರ ತಂದೆ ಸಾಶ್ಧಾರ್ ಮುಖರ್ಜಿ ಭಾರತದಲ್ಲಿ ಮೊದಲಿಗೆ ನಿರ್ಮಾಣವಾದ ಸ್ಟುಡಿಯೋಗಳಲ್ಲಿ ಒಂದಾದ ಫಿಲ್ಮಾಯನ ಸ್ಟುಡಿಯೋದ ಮಾಲೀಕರು. ಜೊತೆಗೆ 1930 ರಿಂದಲೂ ಸಿನಿಮಾ ನಿರ್ಮಾಣದಲ್ಲಿ ತೊಡಗಿಕೊಂಡಿದ್ದರು.