ಬೆಂಗಳೂರು: ರಾಜಧಾನಿ ಬೆಂಗಳೂರಿನಲ್ಲಿ ಶತಕ ಬಾರಿಸಿದ ತರಕಾರಿ ಬೆಲೆಯಲ್ಲಿ ಇದೀಗ ಕುಸಿತಗೊಂಡಿದೆ. ಬೆಂಗಳೂರಿನಲ್ಲಿ ಬೀನ್ಸ್ ಬೆಲೆ ವಿಶೇಷವಾಗಿ ತಿಂಗಳ ಹಿಂದೆ 120 ರೂ.ನಿಂದ 20 ರೂ.ಗೆ ಕುಸಿದಿದೆ. ಕಲಾಸಿಪಾಳ್ಯ ಸಗಟು ಮಾರುಕಟ್ಟೆಯಲ್ಲಿ ಕ್ಯಾರೆಟ್ ಸಹ ಕಿಲೋಗೆ 100 ರೂ.ನಿಂದ 60 ರೂ.ಗೆ ಇಳಿಕೆಯಾಗಿದೆ. ಹಿಂದೆ ಸುರಿದಿದ್ದ ಭಾರಿ ಮಳೆಯಿಂದಾಗಿ ತರಕಾರಿ ಬೆಲೆ ಭಾರೀ ಏರಿಕೆ ಕಂಡಿತ್ತು. ಆದರೆ ಇದೀಗ ತರಕಾರಿ ಬೆಲೆ ಇಳಿಕೆ ಕಂಡಿದ್ದು, ಗ್ರಾಹಕರು ನಿಟ್ಟುಸಿರು ಬಿಡುವಂತಾಗಿದೆ.
