ಫ್ಯಾನ್ ತಯಾರಿಕೆಯಲ್ಲಿ ಮಂಚೂಣಿಯ ಕಂಪನಿ ವೀ ಗಾರ್ಡ್ ನವರ ಇನ್ಸೈಟ್ – ಸಿ ಫ್ಯಾನ್ ಉತ್ತರ ಕರ್ನಾಟಕದ ಮಾರುಕಟ್ಟೆಗೆ ಬಿಡುಗಡೆ ಇಂದು ಮಾಡಲಾಯಿತು ಹುಬ್ಬಳ್ಳಿಯ ನಗರದ ಖಾಸಗಿ ಹೋಟೆಲನಲ್ಲಿ ನಡೆದ ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಮಾರುಕಟ್ಟೆಗೆ ಬಿಎಲ್ ಡಿಸಿ ತಾಂತ್ರಿಕತೆಯ ಇನ್ಸೈಟ್ – ಸಿ ಫ್ಯಾನ್ ಬಿಡುಗಡೆ ಮಾಡಲಾಯಿತು.
ವೀ ಗಾರ್ಡ್ ಕಂಪನಿಯ ರಾಷ್ಟ್ರೀಯ ಉತ್ಪಾದನಾ ಮುಖ್ಯಸ್ಥ ಜೈಮೊನ್ ಮ್ಯಾಥ್ಯೂ, ಹಾಗೂ ಮಾರುಕಟ್ಟೆ ಉಪಾಧ್ಯಕ್ಷ ಸೂರ್ಯಪ್ರಸಾದ ಉತ್ತರ ಕರ್ನಾಟಕ ಭಾಗದ ವಿತರಕ ಜಾನ್ ವಿಲ್ಸನ್ ಅವರು ಇನ್ಸೈಟ್ – ಸಿ ಫ್ಯಾನ್ ಗಳ 12 ವಿವಿಧ ಬಣ್ಣಗಳ ಮಾದರಿಗಳನ್ನು ಬಿಡುಗಡೆ ಮಾಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ವೀ ಗಾರ್ಡ್ ಕಂಪನಿಯ ರಾಷ್ಟ್ರೀಯ ಉತ್ಪಾದನಾ ಮುಖ್ಯಸ್ಥ ಜೈಮೊನ್ ಮ್ಯಾಥ್ಯೂ ಅವರು ಇನ್ಸೈಟ್ – ಸಿ ಬಿಎಲ್ ಡಿಸಿ ಫ್ಯಾನ್ 12 ಬಣ್ಣಗಳಲ್ಲಿ ದೊರಕಲಿದ್ದು ಗುಜರಾತ, ಮಹಾರಾಷ್ಟ್ರ ಗೋವಾ ರಾಜ್ಯಗಳಲ್ಲಿ ಮಾರುಕಟ್ಟೆ ಪ್ರವೇಶ ಮಾಡಿದ್ದು ಗ್ರಾಹಕರಿಂದ ಉತ್ತಮ ಪ್ರತಿಕ್ರಿಯೆ ದೊರಕುತ್ತಿದೆ. ₹6590 ರಿಂದ ₹7590 ರೇಂಜ್ ನಲ್ಲಿ ಫ್ಯಾನ್ ಗಳು ಲಭ್ಯ ಇದ್ದು ಎಲೆಕ್ಟ್ರಿಕ್ ಅಪ್ಲೈನ್ಸಸ್ಸ್ ಮಾರಾಟ ಮಾಡುವ ಮಳಿಗೆಗಳಲ್ಲಿ ಲಭ್ಯವಾಗಲಿವೆ.
60 ವೊಲ್ಟದಿಂದ 310 ವೊಲ್ಟ್ ವರೆಗೆ ಕಾರ್ಯ ನಿರ್ವಹಿಸಲಿದ್ದು ಇತರೆ ಫ್ಯಾನ್ ಗಳಿಗಿಂತ ಕಡಿಮೆ ವಿದ್ಯುಚ್ಛಕ್ತಿ
ಉಪಯೋಗಿಸುವದರಿಂದ ವಿದ್ಯುಚ್ಛಕ್ತಿ ಬಿಲ್ ನ ಮೇಲೆ ಹೆಚ್ಚಿನ ಮಿತವ್ಯಯ ಸಾಧಿಸಲಿದೆ. ಎಂದು ನುಡಿದರು.
ಕಾರ್ಯಕ್ರಮದಲ್ಲಿ ಉತ್ತರ ಕರ್ನಾಟಕ ಭಾಗದ ವಿತರಕರು ಭಾಗವಹಿಸಿದ್ದರು. ಹುಬ್ಬಳ್ಳಿ ಶಾಖೆಯ ಮ್ಯಾನೇಜರ್ ಪ್ರಕಾಶ ರವರು ಹಾಗೂ ಇತರ ಸಿಬ್ಬಂದಿ ಉಪಸ್ಥಿತರಿದ್ದರು.