ಬಿಗ್ ಬಾಸ್ ಮನೆಗೆ ಕಾಲಿಟ್ಟು 1 ವರೆ ತಿಂಗಳೂ ಕಳೆಯುತ್ತಾ ಬಂದರೂ ವರ್ತೂರು ಸಂತೋಷ್ ಅವರು ಮಾತ್ರ ತಮ್ಮ ಮದುವೆ ಗುಟ್ಟು ಬಿಟ್ಟು ಕೊಟ್ಟಿರಲಿಲ್ಲ.
ಅಲ್ಲದೇ ಈ ಬಗ್ಗೆ ಹೊರಗಡೆ ಸಾಕಷ್ಟು ಚರ್ಚೆ ಕೂಡ ನಡೆದಿತ್ತು. ಇನ್ನೂ ವರ್ತೂರು ಸಂತೋಷ್ ಮದುವೆ ವಿವಾದಕ್ಕೆ ಸಂಬಂಧಪಟ್ಟಂತೆ Bigboss ಮನೆಯಲ್ಲೇ ವರ್ತೂರು ಸಂತೋಷ್ ಮನಬಿಚ್ಚಿ ಮಾತನಾಡಿದ್ದಾರೆ.
ನನ್ನ ತಾಯಿಯನ್ನ ನಿರ್ಲಕ್ಷ್ಯ ಮಾಡಿದ ಕಾರಣ ನನ್ನ ಪತ್ನಿ ದೂರ ಹೋದಳು. ನನ್ನ ಜನ ಮತ್ತು ತಾಯಿಯನ್ನ ಬಿಡಲು ನನಗೆ ಆಗೋಲ್ಲ ಅದನ್ನ ಒಪ್ಪೋದಾದರೆ ಬಾ ನೀನು ರಾಣಿಯಾಗಿರು ಅಂದೆ. ಆದ್ರೆ ಆಕೆ ನನ್ನ ಗೇಟ್ ಯಿಂದ ಹೊರ ಹೋಗುವಂತೆ ಹೇಳಿದಳು ಅಂತ ಪತ್ನಿಯ ಬಗ್ಗೆ ಮೊದಲ ಬಾರೀ ವರ್ತೂರು ಸಂತೋಷ್ ಮಾತನಾಡಿದ್ದಾರೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಹೆಚ್ಚು ವೀಕ್ಷಣೆ ಪಡೆಯುತ್ತಿದೆ.