ಬಿಗ್ ಬಾಸ್ ಮನೆಯಲ್ಲಿ ಇದೀಗ ಮ್ಯಾರೇಜ್ ಸೀಕ್ರೆಟ್ನ್ನು ವರ್ತೂರ್ ಸಂತೋಷ್ ಬಿಚ್ಚಿಟಿದ್ದಾರೆ.
ಹೌದು, ದೊಡ್ಮನೆಯಲ್ಲಿ ಎಲ್ಲವೂ ಸೀಕ್ರೆಟ್ ಆಗಿಯೇ ಇರುತ್ತದೆ.ಇಲ್ವೇ ಅದು ಓಪನ್ ಆಗಿಯೇ ಬಿಡುತ್ತದೆ. ಈ ವಿಚಾರದಲ್ಲಿ ವರ್ತೂರ್ ಸಂತೋಷ್ ವಿಚಾರ ಹೆಚ್ಚು ಚರ್ಚೆ ಆಗಿದೆ. ಹುಲಿ ಉಗುರು ವಿಷಯದಲ್ಲಿ ಏನೇನೋ ಆಗಿದೆ. ಇದರ ಬೆನ್ನಲ್ಲಿಯೇ ವರ್ತೂರ್ ಸಂತೋಷ್ ಮದುವೆ ಬಗ್ಗೇನೂ ಸಾಕಷ್ಟು ಸತ್ಯಗಳು ಹೊರ ಬಂದಿವೆ.
ಆದರೆ ಇದೀಗ ಈ ಮದುವೆ ವಿಷಯಕ್ಕೆ ಸಂಬಂಧಿಸಿದಂತೆ ವರ್ತೂರ್ ಸಂತೋಷ್ ಮುಕ್ತವಾಗಿಯೇ ಮಾತನಾಡಿದ್ದಾರೆ. ಮದುವೆ ಆದ್ಮೇಲೆ ಏನೆಲ್ಲ ಆಯಿತು ಅನ್ನುವ ಸತ್ಯವನ್ನು ಹೇಳಿಕೊಂಡಿದ್ದಾರೆ.
ದೊಡ್ಮನೆಯಲ್ಲಿ ವರ್ತೂರ್ ಸಂತೋಷ್ ಮದುವೆ ವಿಷಯ ಹೇಳಿಕೊಂಡಿದ್ದಾರೆ. ನಮ್ಮ ದೊಡ್ಡಪ್ಪ ಹೇಳಿದ್ರು. ಮದುವೆ ಆಗು ಅಂತಲೇ ತಿಳಿಸಿದ್ರು. ಅವರು ತೋರಿಸಿದ ಹುಡುಗಿಯನ್ನ ನಾನು ಮದುವೆ ಆದೆ. ಆದರೆ ಸ್ವಲ್ಪ ದಿನ ಹೋದ್ಮೇಲೆ ನನ್ನ ತಾಯಿಯನ್ನ ಆ ಹುಡುಗಿ ತಿರಸ್ಕಾರ ಮಾಡುತ್ತಿದ್ದಳು.
ಇದಲ್ಲದೇ ನಾನು ನಂಬಿದೆ ಮತ್ತು ನಾನು ಪ್ರೀತಿಸೋ ಅಭಿಮಾನಿಗಳನ್ನ ಬಿಟ್ಟು ಬನ್ನಿ ಎಂದು ಹೇಳ್ತಾ ಇದ್ರು. ಆದರೆ ನಾನು ಅದನ್ನ ಒಪ್ಪಿಕೊಳ್ಳಲಿಲ್ಲ. ಆಗ ಮನೆಯಿಂದ ಹೊರಟು ಹೋದ್ರು. ಆಗಲೇ ಏಲ್ಲವೂ ಸರಿ ಮಾಡ್ಬೇಕು ಅಂತಲೇ ಅವರ ಮನೆ ಬಳಿಗೆ ಹೋದೆ, ಅದರೆ ಮನೆಯ ಗೇಟ್ ಬಳಿಯಿಂದಲೇ ಹೊರಗೆ ಕಳಿಸಿದ್ರು ಎಂದು ವರ್ತೂರ್ ಸಂತೋಷ್ ಅಳಲು ತೋಡಿಕೊಂಡಿದ್ದಾರೆ.
ವರ್ತೂರ್ ಸಂತೋಷ್ ಮದುವೆ ಆಗಿಲ್ಲ ಅಂತಲೇ ಅನೇಕರು ನಂಬಿದ್ದರು. ಈ ವಿಷಯಕ್ಕೆ ಸಂಬಂಧಿಸಿದಂತೆ ವರ್ತೂರ್ ಎಲ್ಲೂ ಏನೂ ಹೇಳಿಕೊಂಡಿರಲಿಲ್ಲ. ಆದರೆ ಹುಲಿ ಉಗುರು ವಿಷಯ ಹೊರ ಬಂದ್ಮೇಲೆ ಅದರ ಬೆನ್ನಲ್ಲಿಯೇ ವರ್ತೂರ್ ಸಂತೋಷ್ ಮದುವೆ ವಿಷಯ ಬಹಿರಂಗೊಂಡಿತ್ತು.