‘ಸೀತಾರಾಮ’ (Seetharama) ಸೀರಿಯಲ್ ಸೀತಾ ಆಗಿ ಮನಗೆಲ್ಲುತ್ತಿರೋ ವೈಷ್ಣವಿ ಗೌಡ (Vaishnavi Gowda) ಅವರು ಹೊಸ ಫೋಟೋಶೂಟ್ ಮೂಲಕ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದ್ದಾರೆ. ಸೀತಾ ನಯಾ ಅವತಾರ ಪಡ್ಡೆಹುಡುಗರಿಗೆ ಖುಷಿ ಕೊಟ್ಟಿದೆ.
ನೆಕ್ಲೆಸ್ ಡ್ರೆಸ್ನಲ್ಲಿ ವೈಷ್ಣವಿ ಗೌಡ (Vaishnavi Gowda) ಹೊಸ ಫೋಟೋಶೂಟ್ ಮಾಡಿಸಿದ್ದಾರೆ. ಸಖತ್ ಗ್ಲ್ಯಾಮರಸ್ ಆಗಿ ಕ್ಯಾಮೆರಾ ಕಣ್ಣಿಗೆ ವೈಷ್ಣವಿ ಪೋಸ್ ನೀಡಿದ್ದಾರೆ. ಲೈಟ್ ಬಣ್ಣದ ಧಿರಿಸಿನಲ್ಲಿ ಸಖತ್ ಹಾಟ್ ಆಗಿ ನಟಿ ಕಾಣಿಸಿಕೊಂಡಿದ್ದಾರೆ.
ಪ್ರಸ್ತುತ ‘ಸೀತಾರಾಮ’ ಸೀರಿಯಲ್ನಲ್ಲಿ ಸೀತಾ ಆಗಿ ಮನಗೆಲ್ಲುತ್ತಿದ್ದಾರೆ. ಸಿಹಿ, ರಾಮ್, ಸೀತಾ ಪಾತ್ರಗಳು ಪ್ರೇಕ್ಷಕರಿಗೆ ಖುಷಿ ಕೊಟ್ಟಿದೆ. ಧಾರಾವಾಹಿಗೆ ಪ್ರಶಂಸೆ ವ್ಯಕ್ತವಾಗಿದೆ