ಬೆಂಗಳೂರು: ಬೆಂಗಳೂರಿನ ಹೆಬ್ಬಾಳ ವಾರ್ಡ್ ವ್ಯಾಪ್ತಿಯ ಜೆ. ಸಿ ನಗರದ ಸರಕಾರಿ ಶಾಲೆಯಲ್ಲಿ ಕೋವಿಡ್ 19 ಲಸಿಕಾ ಅಭಿಯಾನ ಕಾರ್ಯಕ್ರಮ ನಡೆಯಿತು. 15 ರಿಂದ 18ನೇ ವರ್ಷದೊಳಗಿನ ಮಕ್ಕಳ ಕೋವಿಡ್-19 ಲಸಿಕಾ ಅಭಿಯಾನಕ್ಕೆ ಶೋಭಾ ಕರಂದ್ಲಾಜೆ ಚಾಲನೆ ನೀಡಿದರು. ಈ ವೇಳೆ ಮಾತನಾಡಿದ ಅವರು ಕೊರೊನಾ ಮೂರನೇ ಅಲೆಯನ್ನು ತಡೆಯಲು ಕೋವಿಡ್ ಲಸಿಕೆ ಎಲ್ಲರೂ ತಪ್ಪದೇ ಹಾಕಿಸಿಕೊಳ್ಳುವುದು ಅತ್ಯವಶ್ಯಕ, ಶಾಲಾ ಮಕ್ಕಳು ಕಡ್ಡಾಯವಾಗಿ ಲಸಿಕೆಯನ್ನು ಹಾಕಿಕೊಳ್ಳಬೇಕು ಕೊರೊನಾ ನಿರ್ಮೂಲನೆಗೊಳ್ಳುವಲ್ಲಿ ನಾಡಿನ ಜನರ ಸಹಕಾರ ಬೇಕು, ಸರ್ಕಾರ ಸೂಚಿಸಿದ ಕೊರೊನಾ ನಿಯಮಗಳನ್ನು ಚಾಚುತಪ್ಪದೇ ಪಾಲಿಸಬೇಕೆಂದು ಮನವಿ ಮಾಡಿದರು.
