ನಮ್ಮ ಸೌಂದರ್ಯ ಬೇರೆಯವರಿಗೆ ಚೆನ್ನಾಗಿ ಕಾಣಬೇಕು ಎಂದರೆ ಅದಕ್ಕೆ ನಮ್ಮ ತ್ವಚೆ ಮತ್ತು ನಮ್ಮ ತಲೆ ಕೂದಲು ಪ್ರಮುಖ ಕಾರಣವಾಗುತ್ತದೆ. ನಮ್ಮ ಸೌಂದರ್ಯಕ್ಕೆ ನಾವು ಎಷ್ಟು ಪ್ರಾಮುಖ್ಯತೆ ಕೊಡುತ್ತೇವೆ ಅಷ್ಟೇ ನಮ್ಮ ತಲೆ ಕೂದಲಿನ ಆರೋಗ್ಯಕ್ಕೂ ಕೂಡ ಮಾನ್ಯತೆ ಕೊಡಬೇಕು. ಉತ್ತಮ ಆಹಾರ ಪದ್ಧತಿಯನ್ನು ಮೈಗೂಡಿಸಿಕೊಂಡರೆ ನಮ್ಮ ತಲೆ ಕೂದಲಿನ ಆರೋಗ್ಯ ಉತ್ತಮವಾಗಿರುತ್ತದೆ ನಿಜ.
ಒಂದು ಚಿಟಿಕೆ ಅರಿಶಿನದಿಂದ ಲೆಕ್ಕವಿಲ್ಲದಷ್ಟು ಪ್ರಯೋಜನಗಳಿವೆ: ಹೀಗೆ ಮಾಡಿದ್ರೆ ಸುಲಭವಾಗಿ ತೂಕ ಇಳಿಸಿಕೊಳ್ಳಬಹುದು.!
ಬಿಳಿ ಕೂದಲನ್ನು ಕಪ್ಪಾಯಿಸಲು ಹೆನ್ನಾ ಅಥವಾ ಬೇರೆ ಯಾವ ದುಬಾರಿ ಪ್ರಾಡಕ್ಟ್ ಬಳಸುವ ಅವಶ್ಯಕತೆ ಇಲ್ಲ. ಒಂದು ರೂಪಾಯಿ ಖರ್ಚಿಲ್ಲದೆಯೂ ನೈಸರ್ಗಿಕವಾಗಿ ಬಿಳಿ ಕೂದಲನ್ನು ಕಪ್ಪಾಗಿಸಬಹುದು.
ನೀವು ಕಸ ಎಂದು ಬಿಸಾಡುವ ಈರುಳ್ಳಿ ಸಿಪ್ಪೆಯ ಸಹಾಯದಿಂದ ಬಿಳಿ ಕೂದಲನ್ನು ಕೆಲವೇ ಸೆಕೆಂಡುಗಳಲ್ಲಿ ಗಾಢ ಕಪ್ಪು ಬಣ್ಣಕ್ಕೆ ತಿರುಗಿಸಬಹುದು. ಮೊದಲಿಗೆ ಈರುಳ್ಳಿ ಸಿಪ್ಪೆಯನ್ನು ಒಂದು ಬಾಣಲೆಯಲ್ಲಿ ಹಾಕಿ ಸಣ್ಣ ಉರಿಯಲಿ ಅದನ್ನು ಚೆನ್ನಾಗಿ ಕಪ್ಪಾಗುವವರೆಗೂ ಫ್ರೈ ಮಾಡಿ. ಬಳಿಕ ಕೈನಲ್ಲೇ ಕ್ರಶ್ ಮಾಡಿ ಪುಡಿ ಮಾಡಿಕೊಳ್ಳಿ.
ಕ್ರಶ್ ಮಾಡಿದ ಈರುಳ್ಳಿ ಸಿಪ್ಪೆ ಪುಡಿಗೆ ಅಲೋವೇರಾ ಜೆಲ್ ಹಾಕಿ ಚೆನ್ನಾಗಿ ಮಿಕ್ಸ್ ಮಾಡಿ. ಈರುಳ್ಳಿ ಸಿಪ್ಪೆ ಪುಡಿ, ಅಲೋವೇರಾ ಮಿಶ್ರಣವನ್ನು ಕೂದಲಿನ ಬುಡದಿಂದ ತುದಿಯವರೆಗೆ ಹಚ್ಚದರೆ ಕೆಲವೇ ಸೆಕೆಂಡುಗಳಲ್ಲಿ ಬಿಳಿ ಕೂದಲು ನೈಸರ್ಗಿಕವಾಗಿ ಕಪ್ಪಾಗಿ ಕಾಣಿಸುತ್ತದೆ.