ಬಿಳಿ ಕೂದಲು ಇತ್ತೀಚಿನ ದಿನಗಳಲ್ಲಿ ಸಾಮಾನ್ಯ ಸಮಸ್ಯೆಯಾಗಿದೆ. ಚಿಕ್ಕ ಮಕ್ಕಳಿನಿಂದ ಹಿಡಿದು ಯುವಕ- ಯುವತಿಯರಲ್ಲಿ ಅತೀ ಹೆಚ್ಚಾಗಿ ಬಿಳಿ ಕೂದಲಿನ ಸಮಸ್ಯೆಯನ್ನ ಎದುರಿಸುತ್ತಿರುತ್ತದೆ. ಹಲವಾರು ರೀತಿಯ ಪೋಷಕಾಂಶಗಳ ಕೊರತೆ ಇರುತ್ತದೆಯೋ ಅವರಲ್ಲಿ ಬಿಳಿ ಕೂದಲಿನ ಸಮಸ್ಯೆ ಅಧಿಕವಾಗಿ ಕಾಣುತ್ತಿರುತ್ತದೆ.
RCB ನೂತನ ಕ್ಯಾಪ್ಟನ್ ಆಗಿ ಪಾಟಿದಾರ್ ಆಯ್ಕೆ: ಅಭಿಮಾನಿಗಳಿಗೆ ಹೊಸ ಸಂದೇಶ ರವಾನಿಸಿದ ಕೊಹ್ಲಿ!
ಬಿಳಿ ಕೂದಲಿನ ಸಮಸ್ಯೆ ನಿವಾರಣೆಗೆ ದುಬಾರಿ ಹೇರ್ ಪ್ರಾಡಕ್ಟ್ ಕೊಳ್ಳುತ್ತೀರಾ…. ಅದರ ಅಗತ್ಯವೇ ಇಲ್ಲ ತೆಂಗಿನೆಣ್ಣೆಯನ್ನು ಬಳಸಿಯೂ ಬಿಳಿ ಕೂದಲನ್ನು ಶಾಶ್ವತವಾಗಿ ಕಪ್ಪಾಗಿಸಬಹುದು.
ತೆಂಗಿನೆಣ್ಣೆಯೊಂದಿಗೆ ಕರಿಬೇವಿನ ಸೊಪ್ಪು (ಒಂದು ಹಿಡಿ), 8-10 ಲವಂಗ, 1 ಟೀ ಸ್ಪೂನ್ ಮೆಂತ್ಯ ಕಾಳುಗಳು, ಒಂದು ಟೀ ಸ್ಪೂನ್ ಟೀಸೊಪ್ಪು ಬಳಸಿ ನೈಸರ್ಗಿಕವಾದ ಗಾಢ ಕಪ್ಪು ಕೂದಲನ್ನು ನಿಮ್ಮದಾಗಿಸಬಹುದು.
ವಾಸ್ತವಾವಾಗಿ, ಕರಿಬೇವಿನ ಸೊಪ್ಪು, ಲವಂಗ, ಮೆಂತ್ಯ ಕಾಳುಗಳು, ಟೀ ಸೊಪ್ಪು, ತೆಂಗಿನೆಣ್ಣೆ ತಲೆಕೂದಲನ್ನು ಆರೋಗ್ಯಕರವಾಗಿ ಕಪ್ಪಾಗಿಸುವುದರ ಜೊತೆಗೆ ಕೂದಲು ಉದುರುವಿಕೆಯನ್ನು ನಿಯಂತ್ರಿಸಿ ಉದ್ದ ದಪ್ಪವಾದ ಕೂದಲು ಪಡೆಯಲು ಸಹಾಯಕವಾಗಿದೆ.
ಮೊದಲಿಗೆ ಒಂದು ಬಾಣಲೆಯಲ್ಲಿ ತಾಜಾ ಕರಿಬೇವಿನ ಸೊಪ್ಪು, ಲವಂಗ, ಮೆಂತ್ಯ ಕಾಳುಗಳು, ಟೀ ಸೊಪ್ಪು ಎಲ್ಲವನ್ನೂ ಹಾಕಿ ಸಣ್ಣ ಉರಿಯಲ್ಲಿ ಅದು ಕಪ್ಪಾಗುವವರೆಗೂ ಹುರಿದು ಪುಡಿ ಮಾಡಿ. ನಂತರ ಇದನ್ನು ತೆಂಗಿನೆಣ್ಣೆಯೊಂದಿಗೆ ಮಿಕ್ಸ್ ಮಾಡಿ.
ಈ ರೀತಿ ತಯಾರಿಸಿಟ್ಟ ಕೊಬ್ಬರಿ ಎಣ್ಣೆಯನ್ನು ರಾತ್ರಿ ಮಲಗುವ ಮೊದಲು ಕೂದಲಿಗೆ ಹಚ್ಚಿ, ಮರುದಿನ ಬೆಳಿಗ್ಗೆ ಹೇರ್ ವಾಶ್ ಮಾಡಿದ್ರೆ ಕಡು ಕಪ್ಪು ಕೂದಲು ನಿಮ್ಮದಾಗುತ್ತೆ. ನಿಯಮಿತವಾಗಿ ಇದರ ಬಳಕೆಯಿಂದ ಶೀಘ್ರದಲ್ಲೇ ಮೊಣಕಾಲುದ್ದ ಕೂದಲನ್ನು ಸಹ ನಿಮ್ಮದಾಗಿಸಬಹುದು.