ಕಳೆದ ಒಂದು ವರ್ಷದಿಂದ ಯಾವುದೇ ವಹಿವಾಟು ನಡೆಸದ ಯುಪಿಐ ಐಡಿ, ಯುಪಿಐ ನಂಬರ್ ಮತ್ತು ಫೋನ್ ನಂಬರ್ಗಳನ್ನು ಡೀ ಆ್ಯಕ್ಟಿವೇಟ್ ಮಾಡುವ ಸಂಬಂಧ ಎನ್ಪಿಸಿಐ (NPCI guidelines) ಮಾರ್ಗಸೂಚಿ ಹೊರಡಿಸಿದೆ. ಟಿಪಿಎಪಿ ಅಥವಾ ಪಿಎಸ್ಪಿ ಅಪ್ಲಿಕೇಶನ್ಗಳಿಂದ ಹಣಕಾಸು ವಹಿವಾಟನ್ನಾಗಲೀ ಅಥವಾ ಬ್ಯಾಲನ್ಸ್ ಎನ್ಕ್ವೈರಿ ಇತ್ಯಾದಿ ಹಣಕಾಸೇತರ ವಹಿವಾಟನ್ನಾಗಲೀ (Non Banking Transaction) ಮಾಡದೇ ಇದ್ದರೆ ಡೀ ಆಕ್ಟಿವೇಟ್ ಆಗುವ ಸಾಧ್ಯತೆ ಇರುತ್ತದೆ
ಟಿಪಿಎಪಿ, ಅಥವಾ ಥರ್ಡ್ ಪಾರ್ಟಿ ಅಪ್ಲಿಕೇಶನ್ ಪ್ರೊವೈಡರ್ಗಳೆಂದರೆ ಫೋನ್ ಪೇ, ಪೇಟಿಎಂ, ಗೂಗಲ್ ಪೇ ಇತ್ಯಾದಿಯವರು. ಇನ್ನು, ಪಿಎಸ್ಪಿ ಎಂದರೆ ಪೇಮೆಂಟ್ ಸರ್ವಿಸ್ ಪ್ರೊವೈಡರ್ಗಳಾಗಿವೆ. ಪೇಮೆಂಟ್ ಒದಗಿಸುವ ಬ್ಯಾಂಕ್ ಇತ್ಯಾದಿಗಳು ಪಿಎಸ್ಪಿಗಳಾಗಿವೆ.
ಎನ್ಪಿಸಿಐನ ಕೆಲ ಮಾರ್ಗಸೂಚಿಗಳು ಇವು
- ಒಂದು ವರ್ಷದಿಂದ ಯಾವ ವಹಿವಾಟು ನಡೆಸದ ಯುಪಿಐ ಐಡಿಗಳನ್ನು ಎಲ್ಲಾ ಟಿಪಿಎಪಿ ಮತ್ತು ಪಿಎಸ್ಪಿಗಳು ಗುರುತಿಸಬೇಕು. ಯಾವುದೇ ಹಣ ವರ್ಗಾವಣೆ ಆಗದಂತೆ ಆ ಯುಪಿಐ ಐಡಿ ಮತ್ತು ಯುಪಿಐ ನಂಬರ್ಗಳನ್ನು ಡಿಸೇಬಲ್ ಮಾಡಬೇಕು.
- ಈ ಫೋನ್ ನಂಬರ್ ಅನ್ನು ಯುಪಿಐ ಮ್ಯಾಪರ್ನಿಂದ ಪಿಎಸ್ಪಿಗಳು (ಬ್ಯಾಂಕ್) ಡೀರಿಜಿಸ್ಟರ್ ಮಾಡಬೇಕು.
- ಹೀಗೆ ಡಿಸೇಬಲ್ ಆಗಿರುವ ಯುಪಿಐ ಐಡಿಯ ಗ್ರಾಯಕರು ಮತ್ತೊಮ್ಮೆ ಯುಪಿಐ ಆ್ಯಪ್ಗಳಿಗೆ ನೊಂದಣಿ ಆಗಬೇಕು.