ಬೆಂಗಳೂರು:-ಸಿಲಿಕಾನ್ ಸಿಟಿಯಲ್ಲಿ ಕಳಪೆ ಕಾಮಗಾರಿ ಎದ್ದು ಕಾಣುತ್ತಿದೆ. ಇದು ಇಂದು ಇಂದು, ನಿನ್ನೆಯ ಸಮಸ್ಯೆ ಅಲ್ಲ. ಅದರಂತೆ ನಗರದ ಬಿಟಿಎಂ ಲೇ ಔಟ್ 2ನೇ ಹಂತದಲ್ಲಿರುವ ಬಿಳೇಕಹಳ್ಳಿ ಜನರಿಗೆ ಪಾಲಿಕೆಯ ಕಾಮಗಾರಿ ಸಂಕಷ್ಟ ತಂದಿಟ್ಟಿದೆ. ಈ ಏರಿಯಾದಲ್ಲಿ ಇದ್ದ ಸಣ್ಣ ಚರಂಡಿಯಿಂದ ಪದೇ ಪದೇ ನೀರು ಹೊರಬರ್ತಿದ್ದರಿಂದ ಬೇಸತ್ತಿದ್ದ ಜನರು, ಚರಂಡಿಯನ್ನ ಸರಿಪಡಿಸುವಂತೆ ಪಾಲಿಕೆಗೆ ಮನವಿ ಮಾಡಿದ್ದರು. ಅದರಂತೆ ಬಿಬಿಎಂಪಿಯ ಸಿಬ್ಬಂದಿ ಕೆಲಸ ಕೂಡ ಆರಂಭಿಸಿದ್ದಾರೆ, ಆದರೆ ಇದೀಗ ಒಂದೆರಡು ದಿನದಲ್ಲಿ ಕಾಮಗಾರಿ ಮುಗಿಯೋ ಲಕ್ಷಣ ಕಾಣದಂತಾಗಿದೆ.
PM Kisan: ಮದುವೆ ಆಗದ ರೈತರು ಪಿಎಂ ಕಿಸಾನ್ ಹಣವನ್ನು ಪಡೆಯಬಹುದಾ? ನಿಮ್ಮ ಗೊಂದಲಕ್ಕೆ ಇಲ್ಲಿದೆ ಉತ್ತರ!
ರಸ್ತೆ ಬಂದ್ ಆಗಿರೋದರಿಂದ ಜನರು ಮುಖ್ಯರಸ್ತೆಗೆ ಹೋಗೋಕೆ ಪರದಾಡೋ ಸ್ಥಿತಿ ನಿರ್ಮಾಣವಾಗಿದೆ. ನಿತ್ಯ ಕೆಲಸ ಕಾರ್ಯಗಳಿಗೆ ತೆರಳುವವರು ಮುಖ್ಯರಸ್ತೆಗೆ ಬರೋಕೆ ಸುತ್ತಾಡಿಕೊಂಡು ಬರೋ ಸ್ಥಿತಿ ಇದ್ರೆ, ಇತ್ತ ಓಡಾಡೋ ಜನರು ಚರಂಡಿ ಮೇಲೆ ಹಾಕಿರುವ ಮರದ ಹಲಗೆ ಮೇಲೆ ಸರ್ಕಸ್ ಮಾಡಿಕೊಂಡು ಓಡಾಡೋ ಸ್ಥಿತಿ ಎದುರಾಗಿದೆ.
ಇನ್ನು ಈ ಹಿಂದೆ ಮಳೆ ಬಂದಾಗ ಇಡೀ ಏರಿಯಾದ ಮನೆಗಳಿಗೆ ಕೊಳಚೆನೀರು ನುಗ್ಗಿ ಅವಾಂತರ ಸೃಷ್ಟಿಯಾಗ್ತಿದ್ದು, ಆದರೆ ಇದೀಗ ಕಾಮಗಾರಿ ಮಾಡಿದ ಮೇಲೂ ಮತ್ತೆ ಅದೇ ಅವಾಂತರ ಎದುರಾಗೋ ಆತಂಕ ನಿವಾಸಿಗಳಿಗೆ ಎದುರಾಗಿದೆ. ಮಿನಿ ರಾಜಕಾಲುವೆಯ ಬಳಿಯೇ ಖಾಸಗಿ ಅಪಾರ್ಟ್ ಮೆಂಟ್ ತಲೆಎತ್ತಿದ್ದು, ಚರಂಡಿಯಿಂದ ಅಂತರ ಕಾಯ್ದುಕೊಳ್ಳದೇ ಇರೋದು ನಿಯಮಗಳ ಉಲ್ಲಂಘನೆಯನ್ನ ಅನಾವರಣ ಮಾಡ್ತಿದೆ. ಇತ್ತ ಕಾಮಗಾರಿಯಿಂದ ಮತ್ತೆ ಸಮಸ್ಯೆ ಎದುರಾಗೋ ಭೀತಿ ನಿವಾಸಿಗಳಿಗೆ ಎದುರಾಗಿದೆ.
ಸದ್ಯ ಕಾಮಗಾರಿಯಿಂದ ವಾಹನ ಸವಾರರು ರಸ್ತೆ ಬದಲಿಸಿ ಪರದಾಡಿಕೊಂಡು ಓಡಾಡ್ತಿದ್ರೆ, ಇತ್ತ ಜನರು ಕೂಡ ಏರಿಯಾಗೆ ಸಂಪರ್ಕ ಕಲ್ಪಿಸುವ ರಸ್ತೆ ಬಂದ್ ಆಗಿರೋದರಿಂದ ಪರದಾಡುತ್ತಿದ್ದಾರೆ.