ಬೆಂಗಳೂರು: ಎನ್‌ಇಪಿಯಿಂದ ಯುವ ವಿದ್ಯಾರ್ಥಿಗಳಿಗೆ ಅನಿಯಮಿತ ಅವಕಾಶಗಳ ಹೊಸ ದಿಗಂತವನ್ನೇ ತೆರೆದಿದೆ ಎಂದು ಉನ್ನತ ಶಿಕ್ಷಣ ಸಚಿವ ಡಾ. ಸಿ.ಎನ್. ಅಶ್ವತ್ಥನಾರಾಯಣ ಅವರು ಹೇಳಿದ್ದಾರೆ. ಬೆಂಗಳೂರಿನ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಆವರಣದಲ್ಲಿ ನಡೆದ ವಿಶ್ವವಿದ್ಯಾನಿಲಯದ ಐದನೇ ಘಟಿಕೋತ್ಸವ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು. 21ನೇ ಶತಮಾನದ ಜ್ಞಾನ ಆಧರಿತ ಶತಮಾನ ಎಂದ ಅವರು, ರಾಷ್ಟ್ರೀಯ ಶಿಕ್ಷಣ ನೀತಿಯನ್ನು ಅನುಷ್ಠಾನಗೊಳಿಸುವಲ್ಲಿ ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ಪ್ರಯತ್ನವನ್ನು ಶ್ಲಾಘಿಸಿದರು.
ಮುಖ್ಯ ಅತಿಥಿಯಾಗಿ ಪಾಲ್ಗೊಂಡಿದ್ದ ಪ್ರೊ. ಅಶೋಕ್ ಝುಂಝನ್‌ವಾಲಾ ಅವರು ಮತನಾಡಿ,’ ಪದವೀಧರರು ತಮ್ಮ ಕಲಿಕೆಯನ್ನು ಇಲ್ಲಿಗೆ ನಿಲ್ಲಿಸಬಾರದು. ಕಲಿಕೆಯನ್ನು ಮುಂದುವರಿಸಬೇಕು’ ಎಂದರು. ವಿಶ್ವವಿದ್ಯಾನಿಲಯದಿಂದ ಪದವೀಧರರಾದ 3270 ವಿದ್ಯಾರ್ಥಿಗಳನ್ನು ಪ್ರೆಸಿಡೆನ್ಸಿ ವಿಶ್ವವಿದ್ಯಾನಿಲಯದ ನಿಸಾರ್ ಅಹ್ಮದ್ ಅಭಿನಂದಿಸಿದರು. ಉಪ ಕುಲಪತಿ ಡಾ. ಡಿ. ಶುಭಕರ್, ಉಸ್ತುವಾರಿ ರಿಜಿಸ್ಟ್ರಾರ್ ಅಬ್ದುಲ್ ಬಾರಿ, ಗವರ್ನರ್‌ಗಳ ಮಂಡಳಿಯ ಸದಸ್ಯ ಸುಹೇಲ್ ಅಹ್ಮದ್ ಮೊದಲಾದವರು ಉಪಸ್ಥಿತರಿದ್ದರು..

