ಧಾರವಾಡ: ಕಳೆದ ಏಪ್ರಿಲ್ 19 ರಂದು ಕೋಟೂರು ಗ್ರಾಮದಲ್ಲಿ ಹತ್ಯೆಯಾಗಿದ್ದ ಧಾರವಾಡ ಜಿಲ್ಲಾ ಬಿಜೆಪಿಯ ಯುವ ಮೋರ್ಚಾ ಉಪಾಧ್ಯಕ್ಷ ದಿ. ಪ್ರವೀಣ ಕಮ್ಮಾರ ಕುಟುಂಬಸ್ಥರಿಗೆ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿಯವರು ಧನ ಸಹಾಯ ಮಾಡುವ ಮೂಲಕ ಕುಟುಂಬದ ಕಷ್ಟಕ್ಕೆ ನೇರವಾಗಿದ್ದಾರೆ.
ಜಿಲ್ಲಾ ಬಿಜೆಪಿ ಯುವ ಮೋರ್ಚಾ ಉಪಾಧ್ಯಕ್ಷ ಪ್ರವೀಣ ಕಮ್ಮಾರ ಹತ್ಯೆಯ ನಂತರ ಆರ್ಥಿಕ ಸಂಕಷ್ಟದಿಂದಾಗಿ ನೂತನ ಮನೆ ನಿರ್ಮಾಣ ಕಾರ್ಯ ಅರ್ಧಕ್ಕೆ ಸ್ಥಗಿತವಾಗಿತ್ತು. ಇದನ್ನು ಪಕ್ಷದ ಮುಖಂಡರು ಹಾಗೂ ಕಾರ್ಯಕರ್ತರಿಂದ ತಿಳಿದುಕೊಂಡ ಕೇಂದ್ರ ಸಚಿವರು ಕುಟುಂಬಸ್ಥರಿಗೆ ಧನ ಸಹಾಯ ಮಾಡಿ ಸಂಕಷ್ಟದಲ್ಲಿ ಕುಟುಂಬಸ್ಥರ ಬೆನ್ನಿಗೆ ನಿಂತಿದ್ದಾರೆ.
ಇನ್ನೂ ಕೇಂದ್ರ ಸಚಿವರ ಸಹಾಯಧನವನ್ನು ಇಂದು ಧಾರವಾಡ ಗ್ರಾಮೀಣ ಮಾಜಿ ಶಾಸಕರಾದ ಅಮೃತ ದೆಸಾಯಿ, ಜಿಲ್ಲಾ ಅಧ್ಯಕ್ಷರಾದ ಬಸವರಾಜ ಕುಂದಗೋಳಮಠ, ಮಂಡಲ ಅಧ್ಯಕ್ಷ ರುದ್ರಪ್ಪ ಅರಿವಾಳ,ಯುವ ಮೋರ್ಚಾ ಜಿಲ್ಲಾ ಅಧ್ಯಕ್ಷ ಶಂಕರ ಕೋಮಾರದೇಸಾಯಿ ಮತ್ತು ಯಲ್ಲಪ ಜಾನಕನೂರ್ ಸೇರಿದಂತೆ ಪ್ರಮುಖರೆಲ್ಲರು ಸೇರಿ ಕುಟುಂಬಸ್ಥರಿಗೆ ಕೇಂದ್ರ ಸಚಿವರ ಧನ ಸಹಾಯದ ಹಣವನ್ನು ನೀಡಿ, ಕುಟುಂಬಸ್ಥರಿಗೆ ಧೈರ್ಯ ಹೇಳಿದರು.