ರಾಯಚೂರು: ಸಾಲಬಾಧೆ ತಾಳದೆ ತಾಲೂಕಿನ ಗೋನಾಳ ಗ್ರಾಮದ ರೈತ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಡೆದಿದೆ. ರೈತ ಬಸವರಾಜ (55) ಆತ್ಮಹತ್ಯೆ ಮಾಡಿಕೊಂಡ ದುರ್ಧೈವಿ ಆಗಿದ್ದು,
ವಯಸ್ಸಾದಂತೆ ಈ ನೋವುಗಳು ನಿಮ್ಮನ್ನ ಕಾಡುತ್ತಿದ್ದರೆ.. ಇಲ್ಲಿದೆ ಉಚಿತ ಸಲಹೆ ಸರಳ ಚಿಕಿತ್ಸೆ- ಪರಿಹಾರ
ಐದು ಎಕರೆ ಜಮೀನಿನಲ್ಲಿ ತೊಗರಿ ಬಿತ್ತನೆ ಮಾಡಿದ್ದ ರೈತ ಲಕ್ಷಾಂತರ ರೂ. ಸಾಲ ಮಾಡಿಕೊಂಡಿದ್ದ ಎಂದು ತಿಳಿದು ಬಂದಿದೆ. ಸಾಲ ಬಾಧೆ ತಾಳಲಾರದೆ ಸೋಮವಾರ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದರು ಎನ್ನಲಾಗಿದ್ದು ಗಂಭೀರ ಸ್ಥಿತಿಯಲ್ಲಿದ್ದ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು ಇಂದು ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ ಎನ್ನಲಾಗಿದೆ.