ಬೆಂಗಳೂರು: ಮೊಬೈಲ್ ಕಳೆದುಕೊಂಡ ಯುವಕ ಪೊಲೀಸರೊಂದಿಗೆ ವಾಗ್ವಾದಕ್ಕಿಳಿದ ಘಟನೆ ಸಿಲಿಕಾನ್ ಸಿಟಿ ಬೆಂಗಳೂರಿನಲ್ಲಿ ನಡೆದಿದೆ. ನಗರದ ಚರ್ಚ್ ಸ್ಟ್ರೀಟ್ ನಲ್ಲಿ ಈ ಘಟನೆ ನಡೆದಿದ್ದು, ಎಣ್ಣೆ ಮತ್ತಿನಲ್ಲಿದ್ದ ಯುವಕ ಪೊಲೀಸರೊಂದಿಗೆ ಗಲಾಟೆಗೆ ಮುಂದಾಗಿದ್ದ. ಪಬ್ ನಲ್ಲಿ ನನ್ನ ಮೊಬೈಲ್ ಕಿತ್ತುಕೊಂಡಿದ್ದಾರೆ, ಡಿಸಿಪಿ ಏನು ಮಾಡುತ್ತಿದ್ದಾರೆ ಎಂದು ಕಿರಿಕ್ ತೆಗೆದಿದ್ದಾನೆ.
ಇದೇ ವೇಳೆ ಗೃಹ ಸಚಿವ ಆರಗ ಜ್ಞಾನೇಂದ್ರ ಸ್ಥಳಕ್ಕೆ ಭೇಟಿ ನೀಡಿ ಪರಿಸ್ಥಿತಿಯನ್ನು ಸುಧಾರಿಸಲು ನೋಡಿದರು. ಆದರೆ ಆ ಯುವಕ ಗೃಹ ಸಚಿವರಿಗೆ ವ್ಯರ್ಥ ಪ್ರಶ್ನೆಗಳನ್ನು ಮಾಡುತ್ತಾ ಕ್ಯಾತೆ ತೆಗೆದಿದ್ದಾನೆ. ಈ ಹಿನ್ನೆಲೆ ಪೊಲೀಸರು ಯುವಕನನ್ನು ಬಂಧಿಸಿ ಠಾಣೆಗೆ ಕರೆದೊಯ್ದಿದ್ದರು ಎಂದು ಹೇಳಲಾಗಿದೆ.

