ಸ್ವೀಟ್ ಅಂಗಡಿಯಲ್ಲಿ ಗೋಮಾಂಸ ಮಾರುತ್ತಿದ್ದ ಇಬ್ಬರು ಅರೆಸ್ಟ್!

ಚಿಕ್ಕಮಗಳೂರು:- ಜಿಲ್ಲೆಯ ಮೂಡಿಗೆರೆ ತಾಲೂಕಿನ ಬಣಕಲ್‌ ಗ್ರಾಮದಲ್ಲಿ ಮಾರ್ಕೆಟ್​​ನಲ್ಲಿ ಸ್ವೀಟ್ ಅಂಗಡಿ ಹಾಕಿಕೊಂಡು ಗೋಮಾಂಸ ಮಾರಾಟ ಮಾಡುತ್ತಿದ್ದ ಅಸ್ಸಾಂ ಮೂಲದ ಇಬ್ಬರು ವ್ಯಕ್ತಿಗಳನ್ನು ಪೊಲೀಸರು ಅರೆಸ್ಟ್ ಮಾಡಿದ್ದಾರೆ. ಅವನ ನೋವು ಅವನಿಗೆ ಗೊತ್ತಿದೆ: ಸ್ನೇಹಿತ ದರ್ಶನ್ ಪರ ರಕ್ಷಿತಾ ಬ್ಯಾಟಿಂಗ್! ಸ್ವೀಟ್ ಅಂಗಡಿ ಜೊತೆಗೆ ಗೋಮಾಂಸ ಮಾರಾಟ ಮಾಡುತ್ತಿದ್ದರು. ಅಕ್ರಮ ಬಾಂಗ್ಲಾದೇಶದ ನಿವಾಸಿಗಳು ಎಂದು ಸ್ಥಳೀಯರು ಆರೋಪಿಸಿದ್ದಾರೆ. ಸ್ವೀಟ್ ಡಬ್ಬದ ಪಕ್ಕದಲ್ಲಿರುವ ಬ್ಲ್ಯಾಕ್​ ಬ್ಯಾಗ್​ನಲ್ಲಿ ಗೋಮಾಂಸ ಪತ್ತೆಯಾಗಿದ್ದು, ಗೋಮಾಂಸ ಸಮೇತ ಮಾರಾಟಗಾರರನ್ನು ಪೊಲೀಸರು ವಶಕ್ಕೆ ಪಡೆದುಕೊಂಡಿದ್ದಾರೆ.