ಬೆಂಗಳೂರು:– ಪಾಕಿಸ್ತಾನ ಪರವಾಗಿ ಘೋಷಣೆ ಕೂಗಿದ ಇಬ್ಬರನ್ನು ಜೆಪಿ ನಗರ ಪೊಲೀಸರು ಅರೆಸ್ಟ್ ಮಾಡಿದ್ದಾರೆ.
ಆರೋಪಿಗಳು ನಿನ್ನೆ ರಾತ್ರಿ ಪಾಕಿಸ್ತಾನಕ್ಕೆ ಜೈ ಎಂದು ಕೂಗಿದರು. ಇದೀಗ ಬಂಧಿಸಲಾಗಿದ್ದು, ಇನಾಯತ್ ಉಲ್ಲಾ ಖಾನ್ ಹಾಗೂ ಸೈಯದ್ ಮುಬಾರಕ್ ಬಂಧಿತರು. ಜೆಪಿ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಕಿಡಿಗೇಡಿಗಳು ನಿನ್ನೆ ರಾತ್ರಿ ಪಬ್ ವೊಂದರಲ್ಲಿ ಮದ್ಯಪಾನ ಮಾಡಿ ಘೋಷಣೆ ಕೂಗಿದರು. ಮದ್ಯದ ನಶೆಯಲ್ಲಿ ಕೂಗಿದ್ದಾಗಿ ಪೊಲೀಸರ ಮುಂದೆ ಹೇಳಿಕೆ ನೀಡಿದರು.
ಜೆ.ಪಿ ನಗರ ಮೊದಲನೇ ಹಂತದಲ್ಲಿರುವ ಪಬ್ ಇದಾಗಿದ್ದು, ನಿನ್ನೆ ಭಾರತ ಮತ್ತು ಆಸ್ಟ್ರೇಲಿಯಾ ನಡುವೆ ಟಿ೨೦ ಪಂದ್ಯವಿತ್ತು. ಪಬ್ ನಲ್ಲಿ ಪಂದ್ಯ ವೀಕ್ಷಣೆ ಮಾಡುತ್ತಿದ್ದ ಇಬ್ಬರು. ಈ ವೇಳೆ ಪಾಕಿಸ್ತಾನ ಪರವಾಗಿ ಆಸಾಮಿಗಳು ಘೋಷಣೆ ಕೂಗಿದ್ದಾರೆ.
ಪಾಕ್ ಪರವಾಗಿ ಘೋಷಣೆ ಕೂಗಿದ್ದಕ್ಕೆ ಇತರರಿಂದ ಆಕ್ಷೇಪ ವ್ಯಕ್ತಪಡಿಸಲಾಗಿದೆ. ನಂತರ ಪಬ್ ನಲ್ಲಿದ್ದವರಿಂದ ಪೊಲೀಸರಿಗೆ ಮಾಹಿತಿ ನೀಡಲಾಗಿದೆ. ಇಬ್ಬರನ್ನ ವಶಕ್ಕೆ ಪಡೆ ಜೆ ಪಿ ನಗರ ಪೊಲೀಸರು ತನಿಖೆ ಕೈಗೊಂಡಿದ್ದಾರೆ.