ರಾಯಚೂರು: ಜಿಲ್ಲೆಯಲ್ಲಿ ಖೋಟಾ ನೋಟು ಜಾಲ ಪತ್ತೆ ಬೆನ್ನಲ್ಲೆ ಮತ್ತೊಂದು ಪ್ರಕರಣ ದಾಖಲಾಗಿದೆ. ಹೋಟೆಲ್ನಲ್ಲಿ ನಕಲಿ ನೋಟು ಚಲಾವಣೆ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಮಂಜುನಾಥ ಹಾಗೂ ರಮೇಶ್ ನಗರದ ಹೋಟೆಲ್ನಲ್ಲಿ ಚಿಕನ್ ಬಿರಿಯಾನಿ ತಿಂದು 500 ರೂಪಾಯಿ ಬಿಲ್ ಪಾವತಿಸಿದ್ದರು. ಹೋಟೆಲ್ ಮಾಲೀಕನಿಗೆ ಅನುಮಾನ ಬಂದು ನೋಟು ಪರಿಶೀಲಿಸಿದಾಗ ಇವರ ಅಸಲಿಯತ್ತು ಬಯಲಾಗಿದೆ.
ಮನೋರಂಜನೆಗಾಗಿ ಬಳಸುವ ಚಿಲ್ಡ್ರನ್ ಬ್ಯಾಂಕ್ ಆಫ್ ಇಂಡಿಯಾ ಎಂದು ನಮೂದಿಸಿದ್ದ ನಕಲಿ ನೋಟನ್ನ ಆರೋಪಿಗಳು ಬಿಲ್ ಪಾವತಿಗೆ ಬಳಸಿದ್ದರು. ಹೋಟೆಲ್ ಮಾಲೀಕ ಮಾರ್ಕೆಟ್ ಯಾರ್ಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು. ಇಬ್ಬರು ಆರೋಪಿಗಳನ್ನ ಪೊಲೀಸರು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದಾರೆ.