ಬೆಳಗಾವಿ: ಜಿಲ್ಲೆಯ ಗೋಕಾಕ್ ತಾಲೂಕಿನ ದುಪಧಾಳ ಗ್ರಾಮದಲ್ಲಿ ಕಳೆದ ಎರಡು ದಿನಗಳ ಹಿಂದಷ್ಟೇ ವಿದ್ಯುತ್ ಬಿಲ್ ವಸೂಲಿಗೆ ಹೋದ ಹೆಸ್ಕಾಂ ಸಿಬ್ಬಂದಿಗಳ ಮೇಲೆ ಹಿಗ್ಗಾಮುಗ್ಗಾ ಹಲ್ಲೆ ನಡೆಸಿ ಗ್ರಾಹಕರು ಗೂಂಡಾ ವರ್ತನೆ ತೋರಿದ ವಿಡಿಯೋ ವೈರಲ್ ಆಗಿತ್ತು. ಈ ವಿಡಿಯೋ ನೋಡಿದ ನೆಟ್ಟಿಗರು ಕೂಡ ಗ್ರಾಹಕರ ಈ ನಡೆ ಖಂಡಿಸಿದರು.
ಅಕ್ಕ-ಪಕ್ಕದಲ್ಲೇ ನಿಂತರೂ ಮಾತನಾಡದ ದರ್ಶನ್-ಪವಿತ್ರಾ..! ದರ್ಶನ್ ವಿರುದ್ಧ ಸಾಕ್ಷಿ ಹೇಳುವಂತೆ ಪೋಲೀಸರ ಒತ್ತಡ..!?
ಆದರೆ ಈ ಬಗ್ಗೆ ಸಂಕ್ಷಿಪ್ತವಾಗಿ ವರದಿ ಬಿತ್ತರಿಸಲು ಹೋದಾಗ ಅಸಲಿ ಸತ್ಯ ಬೆಳಕಿಗೆ ಬಂದಿದೆ. ಲೈನ್ ಮೆನ್ ಗಳ ಮೇಲೆ ಹಲ್ಲೆ ಮಾಡೋಕೂ ಮುಂಚೆಯೇ ಹೆಸ್ಕಾಂ ಸಿಬ್ಬಂದಿಗಳೇ ಗ್ರಾಹಕರಿಗೆ ಹಿಗ್ಗಾಮುಗ್ಗಾ ಥಳಿಸಿದ್ದಾರೆ. ಆ ಬಳಿಕ ಗ್ರಾಹಕರು ಕಲ್ಲಿನಿಂದ ಹಲ್ಲೆ ನಡೆಸಿದ್ದಾರೆ. ಬಳಿಕ ತಮ್ಮ ಮೇಲೆ ನಡೆದ ಹಲ್ಲೆಯ ವಿಡಿಯೋ ಮಾತ್ರ ವೈರಲ್ ಮಾಡಿ ತಾವು ನಡೆಸಿದ ಹಲ್ಲೆ ದೃಶ್ಯ ತೆಗೆದು ಕೇವಲ 30 ಸೆಕೆಂಡ್ ವಿಡಿಯೋ ಮಾತ್ರ ವೈರಲ್ ಮಾಡಿದ್ದಾರೆ. ಈ ಬಗ್ಗೆ ಹಲ್ಲೆಗೊಳಗಾದ ಗ್ರಾಹಕ ಕುಟುಂಬ ವಿವರವಾಗಿ ಹೇಳಿದೆ.
17,146 ರೂ. ವಿದ್ಯುತ್ ಬಿಲ್ ಬಾಕಿ ಉಳಿಸಿಕೊಂಡ ಹಿನ್ನೆಲೆಯಲ್ಲಿ ವಸೂಲಿಗೆಂದು ಲೈನ್ಮನ್ ತೆರಳಿದ್ದರು. ಆದರೆ, ಬಿಲ್ ಪಾವತಿಸಲು ಗ್ರಾಹಕ ನಿರಾಕರಿಸಿ ಲೈನ್ಮನ್ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಆರೋಪ ಕೇಳಿಬಂದಿತು. ಇದರ ಸತ್ಯ ಪರಿಶೀಲಿಸಿದಾಗ ಲೈನ್ ಮೆನ್ ಗಳದ್ದೂ ಕೂಡ ತಪ್ಪು ಇರೋದು ಗೊತ್ತಾಗಿದೆ.