ಚೆನ್ನೈ: ಹೆಂಗಳೆಯರ ಸೀರಿಯಲ್ ಹುಚ್ಚನ್ನು ಗಂಗಾವತಿ ಪ್ರಾಣೇಶ್ ಭಿನ್ನ-ವಿಭಿನ್ನವಾಗಿ ವರ್ಣಿಸುತ್ತಾರೆ, ಧಾರಾವಾಹಿ ನೋಡಲು ಕೂತರೆ ಪ್ರಪಂಚವೇ ಮುಳುಗಿ ಹೋದರೂ ಗೊತ್ತಾಗುವುದಿಲ್ಲ.. ಧಾರಾವಾಹಿಯನ್ನು ನೋಡಿ ಕಣ್ಣೀರು ಹಾಕುತ್ತಾರೆ.. ಗೆಳತಿಯರಿಗೆ ಕರೆ ಮಾಡಿ ಧಾರಾವಾಹಿ ಕತೆ ಹೇಳುತ್ತಾರೆ.. ಗಂಟೆಗಟ್ಟಲೆ ಧಾರಾವಾಹಿ ಬಗ್ಗೆಯೇ ಮಾತನಾಡುತ್ತಾರೆ… ಪ್ರಾಣೇಶ್ ಮಾತಿನ ಕರಾಮತ್ತು ಅಂಥದ್ದು..
ಈಗ ನಿಮ್ಮ ಮುಂದೆ ಅಂಥದ್ದೇ ಒಂದು ಕತೆ ಹೇಳಬೇಕಾಗಿದೆ. ತಮಿಳುನಾಡಿನ ಕಾಂಚೀಪುರಂನಲ್ಲಿ ಮನೆಯೊಂದನ್ನು ದರೋಡೆ ಮಾಡಲಾಗಿದೆ. ಕಳ್ಳರು ದರೋಡೆ ಮಾಡುತ್ತಿರುವಾಗ ಇಬ್ಬರು ಮಹಿಳೆಯರು ಸೀರಿಯಲ್ ನೋಡುತ್ತಲೇ ಇದ್ದರು! ನಾಲ್ವರು ಕಳ್ಳರ ತಂಡ ಮನೆಯನ್ನು ದರೋಡೆ ಮಾಡಿದ್ದು ಸುಮಾರು 19 ಲಕ್ಷ ರೂಪಾಯಿ ಮೌಲ್ಯದ ಚಿನ್ನಾಭರಣಗಳನ್ನು ದೋಚಿ ಪರಾರಿಯಾಗಿದೆ.

ಆರೋಪಿಗಳ ಪತ್ತೆಗೆ ಪೊಲೀಸರು ಇದೀಗ ಕಾರ್ಯಾಚರಣೆ ಆರಂಭಿಸಿದ್ದಾರೆ. ವೃತ್ತಿಯಲ್ಲಿ ಆಡಿಟರ್ ಆಗಿರುವ ಮೇಗನಾಥನ್ ಅವರ ಮನೆ ದರೋಡೆಯಾಗಿದೆ. ಅವರ ಸಹೋದರ ಸರ್ಕಾರಿ ನೌಕರ. ಗುರುವಾರ ರಾತ್ರಿ ಕಳ್ಳತನವಾಗಿದೆ. ಕಳ್ಳತನ ನಡೆಯುವ ವೇಳೆ ಮೇಘನಾಥನ್ ಅವರ ಪತ್ನಿ ತನ್ನ ಸೋದರ ಸಂಬಂಧಿಯೊಂದಿಗೆ ಸೀರಿಯಲ್ ನೋಡುತ್ತಿದ್ದರು!
ಮನೆಯ ಬಾಗಿಲಿನ ಕಡೆ ಗಮನ ಕೊಡದೇ ಟಿವಿ ಸೌಂಡ್ ಜಾಸ್ತಿ ಇಟ್ಟುಕೊಂಡು ಧಾರಾವಾಹಿ ನೋಡುವುದರಲ್ಲಿ ತಲ್ಲೀನವಾಗಿದ್ದರು. ಈ ಗ್ಯಾಪ್ ನಲ್ಲಿ ಮಾಸ್ಕ್ ಧರಿಸಿ ಬಂದ ತಂಡ ಮನೆಯಲ್ಲಿನ ಆಭರಣ ದೋಚಿದೆ. 50 ಸವರಿನ್ ಚಿನ್ನಾಭರರಣ ಕಳ್ಳರ ಪಾಲಾಗಿದೆ. ಆರೋ ಪಿಗಳ ಪತ್ತೆಗೆ ಪೊಲೀಸರು ಕಾರ್ಯಾಚರಣೆ ಆರಂಭಿಸಿದ್ದಾರೆ. ಆರೋಪಿಗಳು ದ್ವಿಚಕ್ರವಾಹನದಲ್ಲಿ ಮನೆಗೆ ಬಂದಿರುವುದು ಸಿಸಿಟಿವಿ ದೃಶ್ಯಾವಳಿಗಳಿಂದ ತಿಳಿದುಬಂದಿದೆ. ಗೇಟ್‌ನ ಹೊರಗೆ ಇಬ್ಬರು ಕಾವಲು ನಿಂತಿದ್ದರೆ, ಇನ್ನಿಬ್ಬರು ಒಳಗೆ ನುಗ್ಗಿ ದರೋಡೆ ನಡೆಸಿದ್ದಾರೆ.
