ಗದಗ: ಕಳೆದ ಹಲವು ವರ್ಷಗಳಿಂದ ಕಲ್ಯಾಣ ಕರ್ನಾಟದ ಜಲಾಶಯವೊಂದರ ನೀರು ವಿಷಕಾರಿಯಾಗುತ್ತಿದೆ. ಈ ಭಾಗದ ಜನರ ಜೀವನಾಡಿಯಾಗಿರುವ ತುಂಗಭದ್ರಾ ಜಲಾಶಯದ ನೀರು ಹಸಿರು ಬಣ್ಣಕ್ಕೆ ತಿರುಗುವುದು ಜನರ ಆತಂಕಕ್ಕೆ ಕಾರಣವಾಗಿದೆ.
ಅಯ್ಯಪ್ಪ ಸ್ವಾಮಿ ಭಕ್ತರ ಮೇಲೆ ಮದ್ಯ ಸೇವಿಸಿ ಕಾರು ಹರಿಸಿದ ಪ್ರಕರಣ: ಆರೋಪಿ ವಿರುದ್ಧ FIR!
ತುಂಗಭದ್ರಾ ಜಲಾಶಯದ ನೀರೇ ಈಗ ವಿಷವಾಗಿದೆ. ಇದು ಇಂದು ನಿನ್ನೆಯ ಕಥೆಯಲ್ಲ. ಜಲಾಶಯ ತುಂಬುವುದೊಂದೇ ತಡ ಒಂದು ತಿಂಗಳು ಕಳೆಯುತ್ತಿದ್ದಂತೆ ಇಡೀ ನೀರು ಹಸಿರು ಬಣ್ಣಕ್ಕೆ ತಿರುಗುತ್ತದೆ. ಜಲಾಶಯದ ಹಿನ್ನೀರು ಪ್ರದೇಶದಲ್ಲಿ ನೀರೆಲ್ಲಾ ಹಸಿರು ಬಣ್ಣಕ್ಕೆ ತಿರುಗಿ ನೀರು ಸಂಪೂರ್ಣವಾಗಿ ವಿಷಕಾರಿಯಾಗುತ್ತಿದೆ. ಪ್ರತಿ ವರ್ಷ ನೀರು ಹಸಿರು ಬಣ್ಣಕ್ಕೆ ತಿರುಗುವುದು ಜನರ ಆತಂಕಕ್ಕೆ ಕಾರಣವಾಗಿದೆ. ಈ ವಿಷಕಾರಿ ನೀರು ಕೇವಲ ಮನುಷ್ಯರಿಗೆ ಮಾತ್ರ ಅಲ್ಲ, ನೀರಿನಲ್ಲಿರುವ ಜಲಚರಗಳಿಗೂ ಹಸಿರು ಬಣ್ಣದ ನೀರು ಕುತ್ತು ತಂದಿದೆ.
ಗದಗ ಜಿಲ್ಲೆ ಮುಂಡರಗಿ ತಾಲೂಕಿನ ಹಮ್ಮಿಗಿ ಗ್ರಾಮದಲ್ಲಿ ಶಿಂಗಟಾಲೂರು ಏತನೀರಾವರಿ ಯೋಜನೆಯಡಿ ತುಂಗಭದ್ರಾ ನದಿಗೆ ನಿರ್ಮಿಸಿರೋ ಬ್ರಿಜ್ ಕಂ ಬ್ಯಾರೇಜ್ ನೀರೆಲ್ಲಾ ಹಸಿರು ಬಣ್ಣಕ್ಕೆ ತಿರುಗಿ ನೀರು ಸಂಪೂರ್ಣವಾಗಿ ವಿಷಕಾರಿಯಾಗುತ್ತಿದೆ. ಗದಗ-ಬೆಟಗೇರಿ ಅವಳಿ ನಗರ, ಗದಗ, ಮುಂಡರಗಿ ಹಾಗೂ ಶಿರಹಟ್ಟಿ ಭಾಗದ ಪಟ್ಟಣ ಹಾಗೂ ಗ್ರಾಮಗಳಿಗೆ ಕುಡಿಯುವ ನೀರಿಗೆ ಆಧಾರ ಇದೇ ನೀರು. ನೀರು ಹಸಿರಾಗಿದ್ರಿಂದಾಗಿ ಜನರಲ್ಲಿ ಹೆಚ್ಚದ ಆತಂಕ ತಂದಿದೆ.
ಕಾರ್ಖಾನೆಗಳಿಂದ ನದಿಗೆ ಬಿಡುವ ವಿಷಕಾರಿ ತ್ಯಾಜ್ಯ, ಮತ್ತೊಂದೆಡೆ ಜಲಾನಯನ ಪ್ರದೇಶದಲ್ಲಿ ಕೃಷಿ ಭೂಮಿಯಲ್ಲಿ ಅತಿಹೆಚ್ಚು ರಸಗೊಬ್ಬರ ಹಾಗೂ ಔಷಧಿ ಬಳಕೆ ಮಾಡುವುದರಿಂದ ಇದರ ತ್ಯಾಜ್ಯದ ನೀರು ನೇರವಾಗಿ ನದಿಗೆ ಹರಿದು ಬರುತ್ತಿದೆ. ಕೂಡಲೇ ಅಧಿಕಾರಿಗಳು ನೀರನ್ನ ಲ್ಯಾಬ್ ಗೆ ಕಳಿಸಿ ಪರೀಕ್ಷಿಸಲು ಸ್ಥಳೀಯರ ಮನವಿ.