ವಾಷಿಂಗ್ಟನ್: ಯುಎಸ್ ಏಜೆನ್ಸಿ ಫಾರ್ ಇಂಟರ್ನ್ಯಾಷನಲ್ ಡೆವಲಪ್ಮೆಂಟ್ ನಿಧಿಯನ್ನು ರದ್ದುಪಡಿಸಿದ ಬಳಿಕ ಟ್ರಂಪ್ ಮತ್ತೊಂದು ಹೆಜ್ಜೆ ಇಟ್ಟಿದ್ದಾರೆ. ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ಬಳಿಕ ಹಲವು ನಿಯಮಗಳನ್ನು ಜಾರಿಗೆ ತಂದಿದ್ದಾರೆ. ಇದೀಗ ಟ್ರಂಪ್ ಆಡಳಿತ ಏಜೆನ್ಸಿ ಈ ಮೊದಲು ಮಾಡಿಕೊಂಡಿದ್ದ ವಿದೇಶಿ ನೆರವಿನ ಒಪ್ಪಂದಗಳನ್ನು ರದ್ದುಪಡಿಸಿದೆ ಎಂದು ವರದಿಯಾಗಿದೆ.
ಅಮೆರಿಕದ ರಕ್ಷಣಾ ಇಲಾಖೆ ವಿದೇಶಿ ನೆರವಿನ ಪರಾಮರ್ಶೆಯನ್ನು ಪೂರ್ಣಗೊಳಿಸಿದ ಬೆನ್ನಲ್ಲೇ, ಒಪ್ಪಂದಗಳನ್ನು ರದ್ದುಪಡಿಸುವ ನಿರ್ಧಾರ ಕೈಗೊಳ್ಳಲಾಗಿದೆ ಎನ್ನಲಾಗುತ್ತಿದೆ. ಸುಮಾರು 60 ಶತಕೋಟಿ ಡಾಲರ್ ಮೌಲ್ಯದ 15 ಸಾವಿರ ಒಪ್ಪಂದಗಳನ್ನು ರದ್ದುಪಡಿಸಲು ನಿರ್ಧರಿಸಲಾಗಿದೆ. ಇದರಲ್ಲಿ ಅಮೆರಿಕದ ರಕ್ಷಣಾ ಇಲಾಖೆ ಒದಗಿಸಿದ ವಿದೇಶಿ ನೆರವು ಮತ್ತು USAID ನೀಡಿರುವ ನೆರವು ಕೂಡಾ ಸೇರಿದೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ.
ಅಮೆರಿಕದ ರಕ್ಷಣಾ ಇಲಾಖೆಯಡಿ ಸುಮಾರು 4.4. ಶತಕೋಟಿ ರೂಪಾಯಿ ಮೌಲ್ಯದ 4100 ವಿದೇಶಿ ನೆರವಿನ ಅನುದಾನವನ್ನು ಕೂಡಾ ರದ್ದುಪಡಿಸಲಾಗುತ್ತಿದೆ. ಯುಎಸ್ಏಡ್ ಅನುದಾನದ ಪೈಕಿ ಟ್ರಂಪ್ ಆಡಳಿತ 54 ಶತಕೋಟಿ ಡಾಲರ್ ಮೌಲ್ಯದ 5800 ಒಪ್ಪಂದಗಳನ್ನು ಕಡಿತಗೊಳಿಸಲು ನಿರ್ಧರಿಸಿದೆ. ಇದು ಏಜೆನ್ಸಿ ಹಲವು ವರ್ಷಗಳಲ್ಲಿ ನೀಡಲು ಉದ್ದೇಶಿಸಿರುವ ಅನುದಾನದ ಶೇಕಡ 92ರಷ್ಟಾಗಿದೆ.