ಹುಬ್ಬಳ್ಳಿ: ಇಲ್ಲಿಯ ನೈಋತ್ಯ ರೈಲ್ವೆ ವಲಯ ನಿರ್ಮಾಣ ವಿಭಾಗದ ಮುಖ್ಯ ಆಡಳಿತಾಧಿಕಾರಿಯಾಗಿ (ಸಿಎಒ) ನೇಮಕವಾದ ಅಜಯ ಶರ್ಮಾ ಅವರನ್ನು ರೈಲ್ವೆ ಗುತ್ತಿಗೆದಾರರ ಸಂಘದ ವತಿಯಿಂದ ಸನ್ಮಾನಿಸಲಾಯಿತು.
ಪ್ರತಿಷ್ಠಿತ ಹುದ್ದೆ ಅಲಂಕರಿಸಿದ ಶರ್ಮಾ ಅವರು ಇಂಜಿನಿಯರಿಂಗ್ ಹಾಗೂ ಎಂಬಿಎ ಪದವಿ ಪಡೆದಿದ್ದಾರೆ. 1990ರ ಇಂಡಿಯನ್ ರೈಲ್ವೆ (ಐಆರ್ಎಸ್ಇ) ಬ್ಯಾಚ್ ನ ಇವರು 1992ರಲ್ಲಿ ಸೇವೆಗೆ ಸೇರ್ಪಡೆಯಾದರು
Annabhagya Scheme: ಅನ್ನಭಾಗ್ಯ ಅಕ್ಕಿ ಬದಲು ಹಣ ಯೋಜನೆ ಕ್ಯಾನ್ಸಲ್: ಮತ್ತೇನು ಸಿಗಲಿದೆ?
.
ಅಲ್ಲಿಂದ ಹಲವು ಜವಾಬ್ದಾರಿಗಳನ್ನು ನಿಭಾಯಿಸಿದ್ದಾರೆ. ಇವರ ಚಾಕಚಕ್ಯತೆಯ ಕೆಲಸ ಕಾರ್ಯಗಳು ಇಲಾಖೆಯಲ್ಲಿ ಗಮನ ಸೆಳೆದಿವೆ
ಭೂಪಾಲ್ ಹಾಗೂ ಇಂದೋರ್ನಲ್ಲಿ ಯೋಜನಾ ನಿರ್ದೇಶಕರಾಗಿ, ಉತ್ತರ ರೈಲ್ವೆಯಲ್ಲಿ ಮುಖ್ಯ ಸೇತುವೆ ಇಂಜಿನಿಯರ್, ಮುಖ್ಯ ಇಂಜಿನಿಯರ್ ಹಾಗೂ ರೈಲ್ವೆ ಬೋರ್ಡ್ ನಲ್ಲಿ ಕಾರ್ಯಕಾರಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದಾರೆ.
ಗುತ್ತಿಗೆದಾರರ ಸಂಘದ ಅಧ್ಯಕ್ಷ ಡಾ. ವಿ.ಎಸ್.ವಿ. ಪ್ರಸಾದ ಮಾತನಾಡಿ, ಅಪಾರ ಜ್ಞಾನವುಳ್ಳ ಅಜಯ ಶರ್ಮಾ ಅವರು ನೈಋತ್ಯ ರೈಲ್ವೆಗೆ ಬಂದಿರುವುದು ಗುತ್ತಿಗೆದಾರರಲ್ಲಿ ಅಪಾರ ಸಂತೋಷ ಉಂಟು ಮಾಡಿದೆ. ಬಹು ಆಯಾಮದ ವ್ಯಕ್ತಿತ್ವದ ಅವರೊಂದಿಗೆ ಕೆಲಸ ಮಾಡುವುದು ನಮಗೆ ಒದಗಿರುವ ಸದವಕಾಶ ಎಂದು ಬಣ್ಣಿಸಿದರು.
ಕೆ. ರಮಣ ಮೂರ್ತಿ, ಕೆ. ಪೊನ್ನ ರಾವ್ ಇತರ ಸದಸ್ಯರು ಹಾಜರಿದ್ದರು