ಹುಬ್ಬಳ್ಳಿ: ಕರ್ನಾಟಕ ರಾಜ್ಯ ರೈತ ಸಂಘದ ರಾಜ್ಯ ಅಧ್ಯಕ್ಷರಾದ ಸಿದ್ದು ಕುಂದುಗೋಳ ಅವರ ನೇತೃತ್ವದಲ್ಲಿ ಈ ದೇಶದ ಬೆನ್ನೆಲುವಾದ ಪ್ರಗತಿಪರ ರೈತರ ಸಮ್ಮುಖದಲ್ಲಿ ಗೌರವ ಡಾಕ್ಟರೇಟ್ ಪ್ರಶಸ್ತಿ ಪುರಸ್ಕೃತರಾದ ಡಾ.ರಮೇಶ ಮಹಾದೇವಪ್ಪನವರಿಗೆ ಆತ್ಮೀಯವಾಗಿ ಸನ್ಮಾನಿಸಿ ಹೃದಯ ತುಂಬಿ ಅಭಿನಂದಿಸಿದರು.
ಈ ಸಂದರ್ಭದಲ್ಲಿ ಶಿವಾನಂದ ಹೊಸಳ್ಳಿ, ಸೋಮಣ್ಣ ಸವಾಸೆ, ಅಶೋಕ ದೊಡ್ಡಮನಿ, ಮಲ್ಲಪ್ಪ ಸವ್ವಾಸರ, ಎಲ್ಲಪ್ಪ ತಡಸೋದ, ಶ್ರೀ ಫಕೀರಪ್ಪ ಮೋರಬದ, ಉಮೇಶ್ ಮೋರಬದ, ಶಾಂತಪ್ಪ ಸತ್ತೂರು, ಸಿರಿಗದ್ದೆ ಇನ್ನು ಅನೇಕ ರೈತ ಮುಖಂಡರು ಉಪಸ್ಥಿತರಿದ್ದರು.