ಬೀದರ್ : ಕಲ್ಯಾಣ ಕರ್ನಾಟಕ ಸಾರಿಗೆ ಸಂಸ್ಥೆ ಬಸ್ ರಸ್ತೆಯಲ್ಲೇ ಧಗಧಗನೇ ಹೊತ್ತುರಿದಿದೆ. ಬೀದರ ಜಿಲ್ಲೆಯ ಔರಾದ ತಾಲೂಕಿ ಸಂತಪುರ ಸಮೀಪದ ಕಪ್ಪಿಕೆರೆ ಗ್ರಾಮ ಕ್ರಾಸ್ ಬಳಿ ಈ ಅವಘಡ ನಡೆದಿದೆ.
ಬೀದರ ದಿಂದ ಔರಾದಗೆ ತೆರಳುತ್ತಿದ ಕಲ್ಯಾಣ ಕರ್ನಾಟಕ ಸಾರಿಗೆ ಬಸ್ ಎಂಜಿನ್ ನಲ್ಲಿ ಬೆಂಕಿ ಕಾಣಿಸಿಕೊಂಡು, ತಕ್ಷಣವೇ ಧಗ ಧಗನೇ ಹೊತ್ತು ಉರಿದಿದೆ. ಇನ್ನೂ 25 ಜನ ಪ್ರಯಾಣಿಕರು ಪ್ರಾಣಾಪಾಯದಿಂದ ಪಾರಾಗಿದ್ದಾರೆ.
ಘಟಪ್ರಭಾ ನದಿಯಲ್ಲಿ ಬೃಹದಾಕಾರದ ಮೊಸಳೆ ಪ್ರತ್ಯಕ್ಷ ; ಗ್ರಾಮಸ್ಥರಲ್ಲಿ ಆತಂಕ
ಬಸ್ ಡ್ರೈವರ್ ಹಾಗೂ ಕಂಡಕ್ಟರ ತಕ್ಷಣವೇ ಎಚ್ಚೆತು ಎಲ್ಲಾ ಪ್ರಯಾಣಿಕರಿಗೆ ಕೆಳಗಿಳಿಸಿ ಭಾರೀ ಅನಾಹುತವೊಂದನ್ನು ತಪ್ಪಿಸಿದ್ದಾರೆ. ಅಗ್ನಿಶಾಮಕ ದಳ ಸಿಬ್ಬಂದಿ ಕೂಡಲೇ ದೌಡಾಯಿಸಿ ಬೆಂಕಿ ನಂದಿಸಿದ್ದಾರೆ. ಸಂತಪುರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.