ಚಿಕ್ಕಬಳ್ಳಾಪುರ: ರೈತರೊಬ್ಬರು ಜಮೀನಿನಲ್ಲಿ ನಿರ್ಮಿಸಿದ್ದ ಕುರಿ ಕೊಟ್ಟಿಗೆಗೆ ನುಗ್ಗಿರುವ ಬೀದಿನಾಯಿಗಳು ಆರು ಕುರಿಗಳನ್ನು ರಕ್ತ ಹೀರಿ ಕೊಂದು ಹಾಕಿರುವ ಘಟನೆ ಚಿಕ್ಕಬಳ್ಳಾಪುರ ಜಿಲ್ಲೆಯ ಚಿಂತಾಮಣಿ ತಾಲ್ಲೂಕಿನ ಸುಬ್ಬರಾಯನಪೇಟೆ ಗ್ರಾಮದಲ್ಲಿ ತಡರಾತ್ರಿ ನಡೆದಿದೆ. ಗ್ರಾಮದ ಪದ್ಮಮ್ಮ ನರಸಿಂಹಪ್ಪ ದಂಪತಿಗಳಿಗೆ ಸೇರಿದ ಕುರಿಗಳು. ಕೊಟ್ಟಿಗೆ ಹಾಕಿದ್ದ ಬಿದಿರಿನ ತಡಿಕೆಯನ್ನು ಹಾರಿ ಕುರಿ ಹಿಂಡಿನ ಮೇಲೆ ದಾಳಿ ಮಾಡಿರುವ ಬೀದಿನಾಯಿಗಳು, ಒಂದಾದ ನಂತರ ಒಂದರಂತೆ 10 ಕುರಿಗಳ ಮೇಲೆ ಎರಗಿದೆ. ಇನ್ನೂ ನಾಲ್ಕು ಕುರಿಗಳಿಗೆ ಗಂಬೀರ ಗಾಯಗಳಾಗಿವೆ..
