ಈಗಾಗಲೇ ಕಾಂಗ್ರೆಸ್ ಅಭ್ಯರ್ಥಿಯಾದ ಗೀತಾ ಶಿವರಾಜ್ ಕುಮಾರ್ ಹಾಗೂ ಪಕ್ಷೇತರ ಅಭ್ಯರ್ಥಿಯಾದ ಈಶ್ವರಪ್ಪನವರು ಬೃಹತ್ ಮೆರವಣಿಗೆ ಮೂಲಕ ನಾಮಪತ್ರ ಸಲ್ಲಿಸಿದ್ದಾರೆ. ಇನ್ನೂ ಬಿಜೆಪಿ ಅಭ್ಯರ್ಥಿಯಾದ ರಾಘವೇಂದ್ರ ನಾಮಪತ್ರ ಸಲ್ಲಿಸುವುದು ಬಾಕಿ ಇದ್ದು, ಅದಕ್ಕೆ ಕ್ಷಣಗಣನೆ ಶುರುವಾಗಿದೆ. ಇಂದು ಬಿಜೆಪಿ ಅಭ್ಯರ್ಥಿಯಾದ ಬಿವೈ ರಾಘವೇಂದ್ರ ಅವರು ಬೃಹತ್ ಮೆರವಣಿಗೆಯ ಮೂಲಕ ನಾಮಪತ್ರವನ್ನು ಸಲ್ಲಿಸಲಿದ್ದಾರೆ.
ನಗರದ ರಾಮಣ್ಣ ಶ್ರೇಷ್ಟೀ ಪಾರ್ಕ್ ನಲ್ಲಿರುವ ಗಣಪತಿಗೆ ಪೂಜಿ ಸಲ್ಲಿಸಿ ಆರಂಭವಾಗುವ ಈ ಮೆರವಣಿಗೆಯು. ಅನೇಕ ಕಾರ್ಯಕರ್ತರು ಹಾಗೂ ಸಾರ್ವಜನಿಕರೊಂದಿಗೆ ಬೃಹತ್ ಮೆರವಣಿಗೆ ಮೂಲಕ ಗೋಪಿ ವೃತ್ತದ ವರೆಗೂ ಆಗಮಿಸಲಿದೆ.ನಂತರ 12 ಗಂಟೆಗೆ ಜಿಲ್ಲಾ ಚುನಾವಣಾಧಿಕಾರಿಗೆ ರಾಘವೇಂದ್ರ ನಾಮಪತ್ರ ಸಲ್ಲಿಸಲಿದ್ದಾರೆ.ಮೆರವಣಿಗೆ ವೇಳೆ ರಾಘವೇಂದ್ರಗೆ ಸಾತ್ ನೀಡಲಿರುವ ಅನೇಕ ಗಣ್ಯರು,
Gujarat businessman: 200 ಕೋಟಿ ರೂ. ಮೌಲ್ಯದ ಆಸ್ತಿ ದಾನ ಮಾಡಿ ಸನ್ಯಾಸತ್ವ ಸ್ವೀಕರಿಸಿದ ದಂಪತಿ!
ಈ ಕಾರ್ಯಕ್ರಮದಲ್ಲಿ ಬಿ.ಎಸ್.ಯಡಿಯೂರಪ್ಪ, ಹೆಚ್.ಡಿ.ಕುಮಾರಸ್ವಾಮಿ, ಬಸವರಾಜ್ ಬೊಮ್ಮಾಯಿ, ಸಿ.ಟಿ. ರವಿ, ಮುನಿಸ್ವಾಮಿ, ಗೋವಿಂದ ಎಂ ಕಾರಜೋಳ, ಶ್ರೀಮತಿ ಮಾಳವಿಕ ಅವಿನಾಶ್ ಟಿ.ಡಿ.ಮೇಘರಾಜ್ ಸೇರಿದಂತೆ ಪ್ರಮುಖರು ಭಾಗಿಯಾಗಲಿದ್ದು, ಮೆರವಣಿಗೆ ವೇಳೆ ರಾಘವೇಂದ್ರ ಅವರಿಗೆ ಸಾಥ್ ನೀಡಲಿದ್ದಾರೆ.