ಸ್ಯಾಂಡಲ್ ವುಡ್ ನ ಬುದ್ಧಿವಂತ ರಿಯಲ್ ಸ್ಟಾರ್ ಉಪೇಂದ್ರ ಅವರಿಗೆ ಇಂದು ಜನ್ಮದಿನದ ಸಂಭ್ರಮ. 55ನೇ ವಸಂತಕ್ಕೆ ‘ರಿಯಲ್ ಸ್ಟಾರ್’ ಕಾಲಿಟ್ಟಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಶುಭಾಶಯಗಳ ಮಹಾಪೂರವೇ ಹರಿದು ಬರುತ್ತಿದೆ.
ಇನ್ನೂ ಮತ್ತೊಂದೆಡೆ ಉಪ್ಪಿ ಅಭಿಮಾನಿಗಳಿಗೆ 8 ವರ್ಷಗಳ ಬಳಿಕ ಉಪ್ಪಿ ಡೈರೆಕ್ಷನ್ ಮಾಡುತ್ತಿರುವ UI ಸಿನಿಮಾದ ಟೀಸರ್ ಇಂದು ಊರ್ವಶಿ ಚಿತ್ರಮಂದಿರದಲ್ಲಿ ರಿಲೀಸ್ ಆಗಲಿದೆ. ಜೊತೆಗೆ ಅಭಿಮಾನಿಗಳ ಜೊತೆ ಬರ್ತಡೇ ಸೆಲೆಬ್ರೇಷನ್ ಮಾಡಲಿದ್ದಾರೆ.

45 ಸಿನಿಮಾದ ಫಸ್ಟ್ ಲುಕ್ ಕೂಡ ಬಿಡುಗಡೆ ಆಗಲಿದೆ. ಗಣೇಶ ಹಬ್ಬದಂದೇ ಉಪ್ಪಿ ಈ ಬಾರಿ ಬರ್ತಡೇ ತುಂಬಾ ವಿಶೇಷ. UI ಟೀಸರ್ ಟೀಸರ್ ಬಿಡುಗಡೆಗೆ ಹ್ಯಾಟ್ರಿಕ್ ಹೀರೋ ಡಾ.ಶಿವರಾಜ್ ಕುಮಾರ್ ಬರಲಿದ್ದಾರೆ. ಊರ್ವಶಿ ಚಿತ್ರಮಂದಿರದಲ್ಲಿ ಉಪ್ಪಿ ಹಬ್ಬದ ಕಳೆ ಮನೆ ಮಾಡಿದೆ
