ಬಾಗಲಕೋಟೆ:- ಜಿಲ್ಲೆಯ ಬೀಳಗಿ ತಾಲೂಕಿನ ಹೊನ್ಯಾಳ ಕ್ರಾಸ್ ಬಳಿ ಪಾದಚಾರಿಗಳ ಮೇಲೆ ಟಿಪ್ಪರ್ ಬಿದ್ದು ಐವರು ದುರ್ಮರಣ ಹೊಂದಿದ ಘಟನೆ ಜರುಗಿದೆ.
ಗೋಲ್ಡ್ ಪ್ರಿಯರಿಗೆ ಶಾಕ್: ಮತ್ತೆ ಚಿನ್ನ-ಬೆಳ್ಳಿ ದರದಲ್ಲಿ ಏರಿಕೆ ಸಾಧ್ಯತೆ – ಇಲ್ಲಿದೆ ಇಂದಿನ ದರಪಟ್ಟಿ!
ಯಂಕಪ್ಪ ತೋಳಮಟ್ಟಿ, ಆತನ ಪತ್ನಿ ಯಲ್ಲವ್ವ, ಮಗ ಪುಂಡಲೀಕ, ಮಗಳು ನಾಗವ್ವ ಹಾಗೂ ಗಂಡ ಅಶೋಕ ಬಮ್ಮಣ್ಣವರ ಮೃತರು. ಇವರು ಹೊಲದ ಕೆಲಸ ಮುಗಿಸಿ ರಸ್ತೆಪಕ್ಕ ನಿಂತಿದ್ದರು. ಈ ವೇಳೆ ಟೈರ್ ಬ್ಲಾಸ್ಟ್ ಆಗಿ ಟಿಪ್ಪರ್ ವಾಹನ ಒಂದೇ ಕುಟುಂಬದ ಐವರ ಮೇಲೆ ಪಲ್ಟಿಯಾಗಿದೆ. ಘಟನಾ ಸ್ಥಳಕ್ಕೆ ಬೀಳಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ ಎನ್ನಲಾಗಿದೆ.