ಚಾಮರಾಜನಗರ:– ಟಿಕೆಟ್ ಸಿಗಲಾರದೆಂಬ ಅತಂಕದಲ್ಲಿರುವ ಸಂಸದ ಪ್ರತಾಪ್ ಸಿಂಹರನ್ನು ಮುಖ್ಯಮಂತ್ರಿ ಸಿದ್ದರಾಮಯ್ರನ್ನು ಲೇವಡಿ ಮಾಡಿದ್ದಾರೆ.
ತನಗೆ ಪುನಃ ಟಿಕೆಟ್ ಸಿಕ್ಕರೆ ರಾಜ್ಯದ ಮುಖ್ಯಮಂತ್ರಿಯವರ ಕುರ್ಚಿ ಅಲ್ಲಾಡತೊಡಗುತ್ತದೆ ಎಂದು ಪ್ರತಾಪ್ ಸಿಂಹ ಹೇಳಿದ್ದನ್ನು ಸಿದ್ದರಾಮಯ್ಯನವರಿಗೆ ಹೇಳಿದಾಗ, ಲೇವಡಿ ಮಾಡುವ ಸ್ವರದಲ್ಲಿ ಓ ಅಂದ ಅವರು, ಪ್ರತಾಪ್ ಸಿಂಹ ಎರಡು ಸಲ ಸಂಸದರಾಗಿದ್ದರಲ್ಲ? ಯಾಕೆ ತನ್ನ ಕುರ್ಚಿ ಅಲ್ಲಾಡಲಿಲ್ಲ ಎಂದು ಕೇಳಿದರು.
ಮುಂದುವರಿದು ಮಾತಾಡಿದ ಸಿದ್ದರಾಮಯ್ಯ, ಅಸಲು ವಿಷಯವೇನೆಂದರೆ, ಬಿಜೆಪಿಯಿಂದ ಯಾರು ಸ್ಪರ್ಧಿಸಲಿದ್ದಾರೆ, ಅಭ್ಯರ್ಥಿ ಯಾರು ಅನ್ನೋದು ತಮಗೆ ಸಂಬಂಧವಿಲ್ಲದ ವಿಚಾರ, ಕಾಂಗ್ರೆಸ್ ಪಕ್ಷದ ಅಭ್ಯರ್ಥಿಗಳು ಗೆಲ್ಲಬೇಕೆನ್ನುವುದಷ್ಟೇ ತಮ್ಮ ಗುರಿ, ಬಡವರ ಮತ್ತು ಜನಪರ ಕಾರ್ಯಕ್ರಮಗಳನ್ನು ಜನತೆಗೆ ನೀಡಿದ್ದೇವೆ, ಅವುಗಳ ಆಧಾರದ ಮೇಲೆ ಮತಯಾಚಿಸಿ ಕಾಂಗ್ರೆಸ್ ಅಭ್ಯರ್ಥಿಗಳನ್ನು ಗೆಲ್ಲಿಸಬೇಕು ಎಂದು ಹೇಳಿದರು.