ಬೆಂಗಳೂರು ನಗರದಲ್ಲಿ ಹೊರ ರಾಜ್ಯದ ಪುಂಡರ ಹಾವಳಿ ಮಿತಿಮೀರಿದೆ.ಹೋಳಿ ಹಬ್ಬದ ದಿನ ಲಾಲ್ ಬಾಗ್ ನ ಪುಂಡಾಟ ಪ್ರಕರಣದ ಬೆನ್ನಲ್ಲೇ ಮತ್ತೊಂದು ಕೇಸ್ ವರದಿಯಾಗಿದೆ.ಹೋಳಿ ಆಡುವಾಗ ದಾರಿಗಾಗಿ ಹಾರ್ನ್ ಹೊಡೆದಿದ್ದಕ್ಕೆ ಶಾಲಾ ವಾಹನದ ಮೇಲೆ ಕಲ್ಲು ಎಸೆದು ಕಿಡಿಗೇಡಿಗಳು ಅಟ್ಟಹಾಸ ತೋರಿದ್ದಾರೆ.ಇದನ್ನ ಪ್ರಶ್ನಿಸಿದ ಸ್ಕೂಲ್ ಬಸ್ ಡ್ರೈವರ್ ಮೇಲೂ 5-6 ಜನ ಯುವಕರಿಂದ ಹಲ್ಲೆ ಮಾಡಿರೋದಾಗಿ ಕೇಸ್ ದಾಖಲಾಗಿದೆ.ಬ್ಯಾಡರಹಳ್ಳಿ ಠಾಣೆ ವ್ಯಾಪ್ತಿಯಲ್ಲಿ ಹೋಳಿ ಹಬ್ಬದ ದಿನ ನಡೆದ ಘಟನೆ ತಡವಾಗಿ ಬೆಳಕಿಗೆ ಬಂದಿದೆ. ಹೊಸಹಳ್ಳಿ ತುಳಿಸಿ ನಗರದ ಎನಿ ಟೈಮ್ ವಾಟರ್ ಪ್ಲಾಟ್ ಬಳಿ ಇತರಿಗೆ ತೊಂದರೆ ಕೊಡುತ್ತ ಕೆಲ ಹುಡುಗರು ಹೋಳಿ ಆಡ್ತಿದ್ರು. ಈ ವೇಳೆ ಸೆಂಟ್ ಯಶ್ ಶಾಲೆಯ ಬಸ್ ಗೆ ಅಡ್ಡಬಂದು ತೊಂದರೆ ಕೊಟ್ಟಿದ್ದಾರೆ. ಈ ವೇಳೆ ಚಾಲಕ ಹಾರ್ನ್ ಹೊಡೆದಿದ್ದಾನೆ. ಈ ವೇಳೆ ವಾಹನದ ಮೇಲೆ ಕಲ್ಲು ಎಸೆದು ಚಾಲಕ ಸುರೇಶ್ ಮೇಲೆ ಹಲ್ಲೆ ನಡೆಸಿದ್ದಾರೆ. ಫೆಬ್ರವರಿ 14ರ ಸಂಜೆ ಮಕ್ಕಳ ಡ್ರಾಫ್ ಮಾಡಲು ಹೋಗ್ತಿದ್ದ ವೇಳೆ ಈ ಘಟನೆ ನಡೆದಿದೆ. ಘಟನೆ ಹಿನ್ನೆಲೆ ಎನಿಟೈಮ್ ವಾಟರ್ ಪ್ಲಾಂಟ್ ನಲ್ಲಿ ಕೆಲಸ ಅನ್ಯರಾಜ್ಯದ ಯುವಕರ ಮೇಲೆ ಬ್ಯಾಡರಹಳ್ಳಿ ಠಾಣೆಯಲ್ಲಿ ಎಫ್ ಐ ಆರ್ ದಾಖಲಾಗಿದ್ದು. ಪೊಲೀಸ್ರು ಆರೋಪಿಗಳನ್ನ ಬಂಧಿಸಿ ಠಾಣ ಜಾಮೀನಿನ ಮೇಲೆ ಬಿಡುಗಡೆ ಮಾಡಿದ್ದಾರೆ.
ಹಾರ್ನ್ ಹೊಡೆದಿದ್ದಕ್ಕೆ ಶಾಲಾ ವಾಹನದ ಮೇಲೆ ಕಲ್ಲು ಎಸೆದ ಕಿಡಿಗೇಡಿಗಳು
By Author AIN