ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ, ಮೂವರ ದುರ್ಮರಣ

ಕಲಬುರಗಿ: ಲಾರಿ ಮತ್ತು ಕಾರಿನ ನಡುವೆ ಭೀಕರ ಅಪಘಾತ ಸಂಭವಿಸಿದ್ದು, ಮೂವರು ದುರ್ಮರಣಕ್ಕೀಡಾಗಿದ್ದಾರೆ.. ಕಲಬುರಗಿ ಜಿಲ್ಲೆ ಚಿಂಚೋಳಿ ತಾಲ್ಲೂಕಿನ ಮಗದಂಪುರ ಬಳಿ ಈ ಅವಘಡ ಸಂಭವಿಸಿದೆ. ಅವಿನಾಶ್ , ಅಭಿಷೇಕ್ ಮತ್ತು ಸಂಜೀವ್ ಮೃತ ದುರ್ದೈವಿಗಳು.. ಬೀದರ್ ನಿಂದ ತೆಲಂಗಾಣದ ಧಾರೂರ್ ಗೆ ತೆರಳುತ್ತಿದ್ದ ಕಾರು ಮತ್ತು ತೆಲಂಗಾಣದಿಂದ‌ ಚಿಂಚೋಳಿ ಕಡೆ ಬರ್ತಿದ್ದ ಲಾರಿ ನಡುವೆ ಅಪಘಾತ ಸಂಭವಿಸಿದೆ. ಇನ್ನೂ ಅವಘಡದಲ್ಲಿ ಮೂವರಿಗೆ ಗಾಯಗಳಾಗಿದ್ದು, ಆಸ್ಪತ್ರೆಗೆ ದಾಖಲಿಸಲಾಗಿದೆ. ಈ ಸಂಬಂಧ ಕುಂಚಾವರಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ. … Continue reading ಲಾರಿ ಮತ್ತು ಕಾರಿನ ನಡುವೆ ಡಿಕ್ಕಿ, ಮೂವರ ದುರ್ಮರಣ