ಮೊಳಕಾಲ್ಮೂರು: ಲಾರಿಗೆ ಬಸ್ ಡಿಕ್ಕಿ – 9 ಜನರಿಗೆ ಗಾಯ!

ಮೊಳಕಾಲ್ಮೂರು‌:- ಹೋಬಳಿಯ ರಾಂಪುರದ ಅಜ್ಜನಗುಡಿ ಬಳಿ‌, ಕಬ್ಬಿಣದ ರಾಡು ತುಂಬಿಕೊಂಡು ಮುಂದೆ ಹೋಗುತ್ತಿದ್ದ, ಲಾರಿಗೆ ಹಿಂದಿನಿಂದ ಖಾಸಗಿ ಟ್ರಾವಲ್ಸ್ ಬಸ್ಸೊಂದು ಡಿಕ್ಕಿ ಹೊಡೆದ ಪರಿಣಾಮ 9 ಜನರಿಗೆ ಗಂಭೀರ ಗಾಯಗಳಾಗಿವೆ. ಯತ್ನಾಳ್ ನಮ್ಮ ಸಮುದಾಯದವರು, ಬಲಿಪಶು ಆಗ್ಬಾರ್ದು- ರೇಣುಕಾಚಾರ್ಯ! ಬಸ್ ಬಳ್ಳಾರಿಯಿಂದ ಬೆಂಗಳೂರು‌ಕಡೆಗೆ ಹೋಗುತ್ತಿದ್ದು, ಬಸ್ ಚಾಲಕ ಅತಿವೇಗ ಮತ್ತು ಅಜಾಗರೂಕತೆಯಿಂದ ಬಂದು ಡಿಕ್ಕಿ ಹೊಡೆದಿದ್ದ ಪರಿಣಾಮ ಈ ಘಟನೆ ನಡೆದಿದೆ. ಸ್ಥಳಕ್ಕೆ ರಾಂಪುರ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದಾರೆ.