ಬಳ್ಳಾರಿ:- ಅಯೋಧ್ಯೆಗೆ ಹೊರಟಿದ್ದ ಮೈಸೂರು-ಅಯೋಧ್ಯಾ ಧಾಮ ರೈಲು 2 ಗಂಟೆ ಸ್ಥಗಿತಗೊಂಡ ಘಟನೆ ವಿಜಯನಗರ ಜಿಲ್ಲೆಯ ಹೊಸಪೇಟೆಯಲ್ಲಿ ನಡೆದಿದೆ.
ಅನ್ಯಕೋಮಿನ ಯುವಕ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದಲ್ಲದೇ ಪದೇ ಪದೇ ಚೈನ್ ಎಳೆದ ಕಾರಣ ರೈಲು ಸುಮಾರು ಎರಡು ಘಂಟೆಗಳ ಕಾಲ ತಡವಾಗಿ ಚಲಿಸಿದೆ.
ಅನ್ಯಕೋಮಿನ ಯುವಕ ರೈಲಿಗೆ ಬೆಂಕಿ ಹಚ್ಚುತ್ತೇನೆ ಎಂದಿದ್ದಲ್ಲದೇ ಪದೇ ಪದೇ ಚೈನ್ ಎಳೆದ ಕಾರಣ ರೈಲು ಸುಮಾರು ಎರಡು ಘಂಟೆಗಳ ಕಾಲ ತಡವಾಗಿ ಚಲಿಸಿದೆ.
ಮೈಸೂರು-ಅಯೋಧ್ಯಾ ಧಾಮ ರೈಲಿನಲ್ಲಿ ನೂರಾರು ರಾಮ ಭಕ್ತರು ಪ್ರಯಾಣಿಸಲು ಸಜ್ಜಾಗಿದ್ದರು. ಈ ವೇಳೆ ಕ್ಷುಲ್ಲಕ ಕಾರಣಕ್ಕೆ ಹಿಂದೂ ಹಾಗೂ ಅನ್ಯಕೋಮಿನ ಯುವಕನ ಜೊತೆಯಲ್ಲಿ ವಾಗ್ವಾದ ನಡೆದಿದೆ. ಜಗಳ ಶುರುವಾದ ವೇಳೆ ಪದೇ ಪದೇ ಚೈನ್ ಎಳೆದ ಕಾರಣ ಟ್ರೈನ್ ಮುಂದೆ ಸಾಗಲು ತೊಂದರೆಯಾಗಿದೆ.
ಪರಿಸ್ಥಿತಿ ವಿಕೋಪಕ್ಕೆ ತೆರಳುವ ಮುನ್ನವೇ ಸ್ಥಳಕ್ಕೆ ಆಗಮಿಸಿದ ಎಸ್ಪಿ ಶ್ರೀಹರಿಬಾಬು ಹಾಗೂ ಸಿಬ್ಬಂದಿ, ಎಲ್ಲರ ಮನವೊಲಿಸಿ, ರೈಲು ಸಂಚಾರಕ್ಕೆ ಅನುವು ಮಾಡಿಕೊಟ್ಟಿದ್ದಾರೆ. ರೈಲು ಹೊರಡುತ್ತಿದ್ದಂತೆ ಹಿಂದೂ ಪರ ಸಂಘಟನೆಗಳ ಕಾರ್ಯಕರ್ತರು ಹಾಗೂ ಶ್ರೀರಾಮನ ಭಕ್ತರು ನಿಲ್ದಾಣದಲ್ಲೇ ಜೈಶ್ರೀರಾಮ್ ಘೋಷಣೆ ಕೂಗಿದ್ದಾರೆ.
ಅಯೋಧ್ಯೆಗೆ ಸತತ 11ನೇ ದಿನವಾದ ಗುರುವಾರ ರೈಲು ಹೊರಟಿದೆ. ಇದೇ ಮೊದಲಬಾರಿಗೆ ಈ ರೀತಿಯ ವಿವಾದ ಏರ್ಪಟ್ಟಿದೆ. ಪರಿಸ್ಥಿತಿ ತಿಳಿಗೊಳಿಸಿದ ಪೊಲೀಸರು ಅನ್ಯಕೋಮೀನ ಯುವಕರನ್ನು ವಿಚಾರಣೆ ನಡೆಸಿ ಬೇರೆ ಬೋಗಿಯಲ್ಲಿ ಕಳುಹಿಸಿದ್ದಾರೆ.