ಚಂಡೀಗಢ;- ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಅವರು ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ಭ್ರಷ್ಟಾಚಾರದ ವಿರುದ್ಧದ ನರೇಂದ್ರ ಮೋದಿ ಸರ್ಕಾರದ ಹೋರಾಟ ಕೇವಲ ಒಂದು ನಾಟಕ ಎಂದರು. ಯಾರಾದರೂ ದೊಡ್ಡ ಪಾಪ ಅಥವಾ ಅಪರಾಧ ಮಾಡಿ ಬಿಜೆಪಿಗೆ ಸೇರಿದರೆ, ಕೇಂದ್ರೀಯ ತನಿಖಾ ದಳ, ಜಾರಿ ನಿರ್ದೇಶನಾಲಯ ಅಥವಾ ಆದಾಯ ತೆರಿಗೆ ಇಲಾಖೆಯ ಅಧಿಕಾರಿಗಳು ಆ ವ್ಯಕ್ತಿಯನ್ನು ಮುಟ್ಟಲು ಎಂದಿಗೂ ಧೈರ್ಯ ಮಾಡಿಲ್ಲ
ಬಿಜೆಪಿ ಆರೋಪಿಸಿದ ವ್ಯಕ್ತಿ ಪಕ್ಷಕ್ಕೆ ಸೇರಿದ ನಂತರ ಅವರಿಗೆ ಸಚಿವ ಸ್ಥಾನ ನೀಡಲಾಗುತ್ತದೆ’ ಎಂದು ದೂರಿದ್ದಾರೆ.
ಯಾರು ಭ್ರಷ್ಟರು?. ಇ.ಡಿ ದಾಳಿಯಲ್ಲಿ ಸಿಕ್ಕಿಬಿದ್ದು ಜೈಲು ಸೇರಿದವರಲ್ಲ. ಬದಲಿಗೆ ಇ.ಡಿಗೆ ಹೆದರಿ ಬಿಜೆಪಿ ಸೇರಿದವರೇ ನಿಜವಾದ ಅರ್ಥದಲ್ಲಿ ಭ್ರಷ್ಟರು. ಇ.ಡಿಯಿಂದ ಸಿಕ್ಕಿಬಿದ್ದರೂ, ಬಿಜೆಪಿಗೆ ಸೇರದವರು ಕಟು ಪ್ರಾಮಾಣಿಕರು. ಏಕೆಂದರೆ ಇಂದು ಅಥವಾ ನಾಳೆ ತಾವು ಹೊರಬರುತ್ತೇವೆ ಎಂದು ಅವರಿಗೆ ತಿಳಿದಿದೆ.
ಆದರೆ ಭ್ರಷ್ಟಾಚಾರದಲ್ಲಿ ತೊಡಗಿರುವವರಿಗೆ ತಮ್ಮನ್ನು ಬಂಧಿಸಿದರೆ ಜೈಲಿಗೆ ಹೋಗಬೇಕಾಗುತ್ತದೆ ಮತ್ತು ತಕ್ಷಣವೇ ಬಿಜೆಪಿ ಸೇರಬೇಕಾಗುತ್ತದೆ ಎಂದು ತಿಳಿದಿದೆ ಎಂದರು.