ಲಕ್ನೋ: ಮುಂಬರುವ ಲೋಕಸಭೆ ಚುನಾವಣೆಯಲ್ಲಿ (Lok Sabha Election) ಉತ್ತರ ಪ್ರದೇಶದಲ್ಲಿ ಬಹುಜನ ಸಮಾಜವಾದಿ ಪಕ್ಷ (BSP) ಏಕಾಂಗಿಯಾಗಿ ಸ್ಪರ್ಧಿಸಲಿದೆ ಎಂದು ಪಕ್ಷದ ಮುಖ್ಯಸ್ಥೆ ಮಾಯಾವತಿ (Mayawati) ಹೇಳಿದ್ದಾರೆ. ಈ ಮೂಲಕ ಅವರು ಇಂಡಿಯಾ (INDIA) ಒಕ್ಕೂಟದ ಜೊತೆಗೆ ಮೈತ್ರಿ ಮಾಡಿಕೊಳ್ಳುವ ಊಹಾಪೋಹಗಳಿಗೆ ತೆರೆ ಎಳೆದಿದ್ದಾರೆ.
ಬಿಜೆಪಿ ಹಾಲಿ ಸಂಸದರಿಗೆ ಟಿಕೆಟ್ ಟೆನ್ಷನ್ : ಪ್ರತಾಪ್ ಸಿಂಹ ಬದಲು ರಾಜಮನೆತನಕ್ಕೆ ಮೈಸೂರು ಫಿಕ್ಸಾ..!
ಈ ಸಂಬಂಧ ಎಕ್ಸ್ನಲ್ಲಿ ಪೋಸ್ಟ್ ಮಾಡಿರುವ ಅವರು, ಬಿಎಸ್ಪಿ ತನ್ನ ಸ್ವಂತ ಬಲದ ಮೇಲೆ ಸಂಪೂರ್ಣ ಸಿದ್ಧತೆ ಮತ್ತು ಶಕ್ತಿಯೊಂದಿಗೆ ದೇಶದಲ್ಲಿ ಲೋಕಸಭೆ ಸಾರ್ವತ್ರಿಕ ಚುನಾವಣೆಯನ್ನು ಎದುರಿಸುತ್ತಿದೆ ಎಂದು ಹೇಳಿದ್ದಾರೆ. ಇಂತಹ ಪರಿಸ್ಥಿತಿಯಲ್ಲಿ ಚುನಾವಣಾ ಮೈತ್ರಿ ಅಥವಾ ತೃತೀಯ ರಂಗ ರಚನೆಯ ಬಗ್ಗೆ ವದಂತಿಗಳನ್ನು ಹರಡುವುದು ಸಂಪೂರ್ಣ ಸುಳ್ಳು ಮಾಹಿತಿಯಾಗಿದೆ. ಇಂತಹ ಸುದ್ದಿಗಳ ಬಗ್ಗೆ ಜನರು ಎಚ್ಚರಿಕೆ ವಹಿಸಬೇಕು ಎಂದು ಮನವಿ ಮಾಡಿದ್ದಾರೆ.
ಮತ್ತೊಂದು ಸ್ಪೋಟಕ ಭವಿಷ್ಯ ನುಡಿದ ಯಶ್ವಂತ ಗುರೂಜಿ: ಮಹಿಳಾ ಪ್ರಧಾನಿಯಾಗಿ ದೇಶದ ಚುಕ್ಕಾಣಿ
ವಿಶೇಷವಾಗಿ ಉತ್ತರಪ್ರದೇಶದಲ್ಲಿ ಬಿಎಸ್ಪಿ ಏಕಾಂಗಿಯಾಗಿ ಚುನಾವಣೆ ಎದುರಿಸುತ್ತಿದ್ದು, ಪ್ರತಿಪಕ್ಷಗಳು ಸಾಕಷ್ಟು ಚಂಚಲತೆ ತೋರುತ್ತಿವೆ. ಆದ್ದರಿಂದಲೇ ದಿನವೂ ನಾನಾ ರೀತಿಯ ವದಂತಿಗಳನ್ನು ಹಬ್ಬಿಸಿ ಜನರನ್ನು ದಾರಿ ತಪ್ಪಿಸುವ ಪ್ರಯತ್ನ ಮಾಡುತ್ತಲೇ ಇರುತ್ತವೆ. ಆದರೆ ಬಹುಜನ ಸಮುದಾಯದ ಹಿತದೃಷ್ಟಿಯಿಂದ ಏಕಾಂಗಿಯಾಗಿ ಚುನಾವಣೆ ಎದುರಿಸುವ ಬಿಎಸ್ಪಿ ನಿರ್ಧಾರ ದೃಢವಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.