ಸ್ಟೇಜ್ ಮೇಲೆ ಮಾತನಾಡುತ್ತಿರುವಾಗ, ಮದುವೆ ಫಂಕ್ಷನ್ ನಲ್ಲಿ ಡಾನ್ಸ್ ಮಾಡುತ್ತಾ, ಜಿಮ್ ನಲ್ಲಿ ವ್ಯಾಯಾಮ ಮಾಡುತ್ತಾ ಅಥವಾ ಕ್ರಿಕೆಟ್ ಆಡುವಾಗಲೇ ಹೃದಯಘಾತವಾಗಿರುವ ಅನೇಕ ಪ್ರಕರಣಗಳು ನಮ್ಮ ಕಣ್ಣಮುಂದಿವೆ. ಹೀಗಾಗಿ ಪುಟ್ಟ ಹೃದಯದ ವಿಚಾರದಲ್ಲಿ ಯಾವತ್ತಿಗೂ ಕೂಡ ನಿರ್ಲಕ್ಷ್ಯ ಮಾಡಬಾರದು…
ಈ ರಾಶಿಯವರಿಗೆ ಅದೃಷ್ಟದ ಯೋಗಗಳ ಸುರಿಮಳೆ: ಮಂಗಳವಾರದ ರಾಶಿ ಭವಿಷ್ಯ 11 ಫೆಬ್ರವರಿ 2025!
ಒಣಗಿದ ಹಣ್ಣುಗಳು ಎಂದರೆ ಬಾದಾಮಿ, ಗೋಡಂಬಿ, ಒಣದ್ರಾಕ್ಷಿ ಮತ್ತು ಪಿಸ್ತಾ ಮಾತ್ರ ಎಂದು ಜನರು ಭಾವಿಸುತ್ತಿದ್ದರು. ಆದರೆ ಕಾಲ ಕಳೆದಂತೆ, ಅನೇಕ ಹೊಸ ಬಗೆಯ ಒಣ ಹಣ್ಣುಗಳು ಮತ್ತು ಬೀಜಗಳು ಮಾರುಕಟ್ಟೆಯಲ್ಲಿ ಲಭ್ಯ ಇವೆ.
ಈಗ, ಇವುಗಳ ಸಾಲಿಗೆ ಮತ್ತೊಂದು ಹೊಸ ಬಗೆಯ ಬೀಜ ಸೇರಿಕೊಂಡಿದೆ. ಅವು ಸೆಣಬಿನ ಬೀಜಗಳು. ಸೆಣಬಿನ ಬೀಜಗಳು ಫೈಬರ್, ಪ್ರೋಟೀನ್, ಒಮೆಗಾ 3 ಮತ್ತು ಒಮೆಗಾ 6 ಕೊಬ್ಬಿನಾಮ್ಲಗಳು, ಪೊಟ್ಯಾಸಿಯಮ್, ರಂಜಕ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ಸಲ್ಫರ್, ಕಬ್ಬಿಣ, ಸತು, ಸೋಡಿಯಂ ಮತ್ತು ವಿಟಮಿನ್ ಬಿ 6, ಬಿ 12, ಡಿ ಮತ್ತು ಇ ಗಳಿಂದ ಸಮೃದ್ಧವಾಗಿವೆ
ಈ ಬೀಜಗಳನ್ನು ಸಲಾಡ್ ಮತ್ತು ಜ್ಯೂಸ್ಗಳ ಮೇಲೆ ಸಿಂಪಡಿಸಬಹುದು. ನೀರಿನಲ್ಲಿ ನೆನೆಸಿ ಕುಡಿಯುವುದರಿಂದ ತುಂಬಾ ಒಳ್ಳೆಯದು. ಸೆಣಬಿನ ಬೀಜಗಳನ್ನು ತಿನ್ನುವುದರಿಂದ ಹೊಟ್ಟೆಯ ಸಮಸ್ಯೆಗಳನ್ನು ನಿಯಂತ್ರಣದಲ್ಲಿಡಬಹುದು. ಜೀರ್ಣಕ್ರಿಯೆಯೂ ಸುಧಾರಿಸುತ್ತದೆ
ಅದೇ ರೀತಿ, ಇದು ಮಾರಕ ಹೃದಯ ಸಮಸ್ಯೆಗಳನ್ನು ಸಹ ನಿಯಂತ್ರಿಸುವಲ್ಲಿ ಸಹಾಯ ಮಾಡುತ್ತದೆ. ಇದು ದೇಹದಲ್ಲಿನ ಕೆಟ್ಟ ಕೊಲೆಸ್ಟ್ರಾಲ್ ಅನ್ನು ಸಹ ನಿಯಂತ್ರಿಸಿ, ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ
ರೋಗನಿರೋಧಕ ಶಕ್ತಿ ಬಲವಾಗಿದ್ದರೆ, ಋತುಮಾನದ ರೋಗಗಳು ದಾಳಿ ಮಾಡುವುದಿಲ್ಲ. ಹೃತು ಮಾನದ ರೋಗಗಳು ಅಷ್ಟೆ ಅಲ್ಲ, ಈ ಬೀಜಗಳ ಸEೌನೆಯಿಂದ ನಿಮಗೆ ಹಾರ್ಟ್ ಅಟ್ಯಾಕ್ ಆಗುವ ಸಾದ್ಯತೆ ತುಂಬಾ ಕಡಿಮೆ ಎಂದು ತಜ್ಞರು ಹೇಳುತ್ತಾರೆ.
ಸೆಣಬಿನ ಬೀಜಗಳನ್ನು ತಿನ್ನುವುದರಿಂದ ವಿಶೇಷವಾಗಿ ಕೀಲು ನೋವನ್ನು ತಡೆಗಟ್ಟಬಹುದು. ಕೀಲು ನೋವಿನಿಂದ ಬಳಲುತ್ತಿರುವವರು ಈ ಬೀಜಗಳನ್ನು ಸೇವಿಸಿದರೆ ಶೀಘ್ರದಲ್ಲೇ ಪರಿಹಾರ ಸಿಗುತ್ತದೆ.
ಈ ಬೀಜಗಳು ಚರ್ಮ ಮತ್ತು ಕೂದಲಿನ ಆರೋಗ್ಯಕ್ಕೂ ಒಳ್ಳೆಯದು. ಆದ್ದರಿಂದ ನಿಯಮಿತವಾಗಿ ಈ ಬೀಜಗಳನ್ನು ಸೇವಿಸುವುದು ಉತ್ತಮ.