ಅಡುಗೆ ಮಾಡಲು ಸುಲಭವಾಗುತ್ತೆ ಎಂದು ನೀವು ಹೆಚ್ಚು ಆಲೂಗಡ್ಡೆಯನ್ನು ಒಟ್ಟಿಗೆ ಬೇಯಿಸಿ ಫ್ರಿಜ್ ನಲ್ಲಿ ಸಂಗ್ರಹಿಸುತ್ತೀರಾ? ಹಾಗಿದ್ರೆ ಇದನ್ನು ನೀವು ಓದಲೇಬೇಕು. ಏಕೆಂದರೆ ಬೇಯಿಸಿದ ಆಲೂಗಡ್ಡೆಯನ್ನು ಸಂಗ್ರಹಿಸುವ ಸರಿಯಾದ ವಿಧಾನ ಮತ್ತು ಅದನ್ನು ಫ್ರಿಜ್ ನಲ್ಲಿ ಸಂಗ್ರಹಿಸುವುದರಿಂದ ಉಂಟಾಗುವ ಹಾನಿ ಅಷ್ಟಿಷ್ಟಲ್ಲ.
ಬೇಯಿಸಿದ ಆಲೂಗಡ್ಡೆಯನ್ನು ಬಹುತೇಕ ಪ್ರತಿ ಮನೆಯಲ್ಲೂ ಅಡುಗೆಯಲ್ಲಿ ಬಳಸುತ್ತಾರೆ. ಏಕೆಂದರೆ ಇದು ಸಸ್ಯಾಹಾರಿಯಿಂದ ಮಾಂಸಾಹಾರದವರೆಗೆ ಎಲ್ಲಾ ರೀತಿಯ ಆಹಾರಗಳೊಂದಿಗೆ ಸುಲಭವಾಗಿ ಹೊಂದಿಕೊಳ್ಳುತ್ತದೆ. ಆದರೆ ಅದರ ಸಂಗ್ರಹದ ವಿಷಯಕ್ಕೆ ಬಂದಾಗ, ಹೆಚ್ಚಿನ ಜನರು ತಪ್ಪು ಮಾಡುತ್ತಾರೆ. ಅದರ ತಾಜಾತನವನ್ನು ಕಾಪಾಡಿಕೊಳ್ಳಲು, ಬೇಯಿಸಿದ ಆಲೂಗಡ್ಡೆಯನ್ನು ಫ್ರಿಜ್ನಲ್ಲಿ ಸಂಗ್ರಹಿಸೋದು ತುಂಬಾ ದೊಡ್ಡ ತಪ್ಪು ಮತ್ತು ಹಾನಿಕಾರಕ ಮಾರ್ಗ. ಇದರಿಂದ ಏನೆಲ್ಲಾ ಸಮಸ್ಯೆ ಉಂಟಾಗುತ್ತೆ ನೋಡೋಣ.
ವಿನ್ಯಾಸ ಹದಗೆಡುತ್ತದೆ
ಫ್ರಿಜ್ನಲ್ಲಿ ಅತಿಯಾದ ಶೀತದಿಂದಾಗಿ ಬೇಯಿಸಿದ ಆಲೂಗಡ್ಡೆ ಕೆಟ್ಟದಾಗಿ ಕಾಣಿಸುತ್ತದೆ. ಅದರಲ್ಲಿರುವ ಪಿಷ್ಟ ಹೆಚ್ಚು ಸ್ಫಟಿಕ ರೂಪಕ್ಕೆ ಬದಲಾಗುವ ಮೂಲಕ, ಅದು ಮೂಲ ವಿನ್ಯಾಸವನ್ನು ಕಳೆದುಕೊಳ್ಳುತ್ತದೆ.
ವಿಚಿತ್ರ ರುಚಿ
ಫ್ರಿಜ್ನಲ್ಲಿಟ್ಟ ಬೇಯಿಸಿದ ಆಲೂಗಡ್ಡೆ ತಮ್ಮ ಮೂಲ ರುಚಿಯನ್ನು (taste changes) ಕಳೆದುಕೊಳ್ಳುತ್ತದೆ. ತಂಪಿನ ಕಾರಣದಿಂದ ಹೆಚ್ಚು ಮೃದುವಾಗುತ್ತದೆ ಮತ್ತು ವಿಚಿತ್ರ ರುಚಿ ನೀಡುತ್ತದೆ. ಕೆಲವೊಮ್ಮೆ ತಿನ್ನಲು ಸಾಧ್ಯ ಆಗದೇ ಇರುವಷ್ಟು ಕೆಟ್ಟ ರುಚಿ ಹೊಂದಿರುತ್ತೆ.
ಆರೋಗ್ಯಕ್ಕೆ ಹಾನಿಕಾರಕ
ಬೇಯಿಸಿದ ಆಲೂಗಡ್ಡೆಯನ್ನು ತಂಪಾಗಿಸುವುದು ಮತ್ತು ನಂತರ ಅವುಗಳನ್ನು ಮತ್ತೆ ಬಿಸಿ ಮಾಡುವುದು ಅದರಲ್ಲಿ ಅಕ್ರಿಲಾಮೈಡ್ ಮಟ್ಟ ಹೆಚ್ಚಿಸುತ್ತದೆ. ಇದರಿಂದ ಆರೋಗ್ಯಕ್ಕೆ ಹಾನಿಕಾರಕ. (health effect) ಇದಲ್ಲದೆ, ಆಲೂಗಡ್ಡೆಯನ್ನು ಫ್ರಿಜ್ನಲ್ಲಿ ಸಂಗ್ರಹಿಸುವುದರಿಂದ ಎಲ್ಲಾ ಪೋಷಕಾಂಶಗಳು ನಾಶವಾಗುತ್ತವೆ.