ಟೀಮ್ ಇಂಡಿಯಾದಲ್ಲಿ ಒಬ್ಬ ಆಟಗಾರನಿಗೆ ರಿಪ್ಲೇಸ್ ಮಾಡೋಕೆ ಆತನಷ್ಟೇ ಸಾಮರ್ಥ್ಯವಿರುವ ಆಟಗಾರನಿಲ್ಲ. ವಿಶ್ವಕಪ್ ಫೈನಲ್ ಸೋಲಿಗೆ ಆ ಆಟಗಾರರನ ಅನುಪಸ್ಥಿಯೇ ಕಾರಣ.
ಭಾರತೀಯರ ಕೈಯಿಂದ ಏಕದಿನ ವಿಶ್ವಕಪ್ ಕೈ ಜಾರಿದೆ. ಸತತ 10 ಪಂದ್ಯ ಗೆದ್ದು ಫೈನಲ್ ಪ್ರವೇಶಿಸಿದ್ದ ಟೀಂ ಇಂಡಿಯಾ, ಫೈನಲ್ನಲ್ಲಿ ಮುಗ್ಗರಿಸಿತು. ಫೈನಲ್ ಸೋಲಿಗೆ ನಾನಾ ಕಾರಣಗಳಿರಬಹುದು. ಆದ್ರೆ ತಂಡದಲ್ಲಿ ಲೋ ಆರ್ಡರ್ ಬ್ಯಾಟಿಂಗ್ ವೀಕ್ ಆಗಿದ್ದು, 6ನೇ ಬೌಲರ್ ಇಲ್ಲದೆ ಇದ್ದದ್ದು ಸೋಲಿಗೆ ಮೇನ್ ರೀಸನ್. ಆ ಎರಡು ಸ್ಥಾನ ತುಂಬಿದ್ದ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದ ಕಿಕೌಟ್ ಆಗಿದ್ದು, ಭಾರತಕ್ಕೆ ಹಿನ್ನಡೆಯಾಯ್ತು.
ಮೊದಲ ನಾಲ್ಕು ಪಂದ್ಯ ಆಡಿದ್ಮೇಲೆ ಪಾಂಡ್ಯ ಇಂಜುರಿಯಾಗಿ ವಿಶ್ವಕಪ್ನಿಂದಲೇ ಕಿಕೌಟ್ ಆದ್ರು. ಆದ್ರೂ 6 ಪಂದ್ಯಗಳಲ್ಲಿ ಅವರ ಅನುಪಸ್ಥಿತಿ ಕಾಡಲಿಲ್ಲ. ಯಾಕಂದ್ರೆ, ಟಾಪ್ ಆರ್ಡರ್ ಬ್ಯಾಟರ್ಸ್ ಉತ್ತಮ ಪ್ರದರ್ಶನ ನೀಡಿದ್ರು. ಐವರು ಬೌಲರ್ಸ್ ಅದ್ಭುತವಾಗಿ ದಾಳಿ ಮಾಡಿದ್ರು. ಆದ್ರೆ ಫೈನಲ್ನಲ್ಲಿ ಯಾವಾಗ ಇಂಡಿಯಾ ಬ್ಯಾಟಿಂಗ್ ಲೈನ್ ಅಪ್ ಕೋಲ್ಯಾಪ್ಸ್ ಆಯ್ತೋ, ಮಿಡಲ್ ಓವರ್ಗಳಲ್ಲಿ ಯಾವಾಗ ವಿಕೆಟ್ಗಳನ್ನ ಪಡೆಯುವಲ್ಲಿ ಸ್ಪಿನ್ನರ್ಸ್ ಎಡವಿದ್ರೂ ಆಗ ಟೀಂ ಇಂಡಿಯಾಗೆ ಹಾರ್ದಿಕ್ ಪಾಂಡ್ಯ ಅನುಪಸ್ಥಿತಿ ಕಾಡೋಕೆ ಶುರುವಾಯ್ತು.
ಪಾಂಡ್ಯ ಇದ್ದಿದ್ದರೆ ಲೋ ಆರ್ಡರ್ನಲ್ಲಿ 30-40 ರನ್ ಹೊಡೆಯುತ್ತಿದ್ದರು. ಐದಾರು ಓವರ್ ಬೌಲಿಂಗ್ ಸಹ ಮಾಡುತ್ತಿದ್ದರು. ಇದು ಟೀಂ ಇಂಡಿಯಾಗೆ ನೆರವಾಗುತ್ತಿತ್ತು. ಆದ್ರೆ ಪಾಂಡ್ಯ ಬದಲಿಗೆ ಆಡಿದ್ದ ಸೂರ್ಯಕುಮಾರ್ ಯಾದವ್, ವಿಶ್ವಕಪ್ನಲ್ಲಿ ಆಡಿದಕ್ಕಿಂತ ಪೆವಿಲಿಯನ್ಗೆ ಪರೇಡ್ ನಡೆಸಿದ್ದೇ ಜಾಸ್ತಿ. 7 ಪಂದ್ಯಗಳಲ್ಲಿ ಅವರಿಗೆ ಬ್ಯಾಟಿಂಗ್ ಮಾಡಲು ಅವಕಾಶ ಸಿಕ್ಕಿದ್ದು, ಇಂಗ್ಲೆಂಡ್ ವಿರುದ್ಧ ಮಾತ್ರ 49 ರನ್ ಬಾರಿಸಿದ್ರು. ಉಳಿದಂತೆ ಯಾವ್ದೇ ಮ್ಯಾಚ್ನಲ್ಲೂ ಸೂರ್ಯ ಆಡಲೇ ಇಲ್ಲ.
ಲೀಗ್, ಸೆಮಿಸ್ನಲ್ಲಿ ಇತರೆ ಬ್ಯಾಟರ್ಸ್ ಆಡಿದ್ದರಿಂದ ಸೂರ್ಯನ ಕಳಪೆ ಆಟ ಮರೆಮಾಚಿತು. ಆದ್ರೆ ಫೈನಲ್ನಲ್ಲಿ ಟಾಪ್ ಆರ್ಡರ್ ಬ್ಯಾಟರ್ಸ್ ವಿಫಲರಾದ್ರು. ಈ ಸಮಯದಲ್ಲಿ ನಿಂತು ಆಡೋದು ಬದಲು 28 ಬಾಲ್ನಲ್ಲಿ 18 ರನ್ ಗಳಿಸಿ ಔಟಾಗಿ ಹೋದ್ರು. 7 ಪಂದ್ಯದಿಂದ ಸೂರ್ಯ ಹೊಡೆದಿರುವುದು ಜಸ್ಟ್ 104 ರನ್. ಒಂದೂ ಅರ್ಧಶತಕವಿಲ್ಲ. ಇಡೀ ವಿಶ್ವಕಪ್ನಲ್ಲಿ ಟೀಂ ಇಂಡಿಯಾ ಪರ ವಿಫಲವಾಗಿರುವ ಏಕೈಕ ಆಟಗಾರ ಅಂದ್ರೆ ಅದು ಸೂರ್ಯ ಮಾತ್ರ.
ಇನ್ನು ಹಾರ್ದಿಕ್ ಪಾಂಡ್ಯ ಇಂಜುರಿಯಾದ್ರೆ ಆತನಿಗೆ ರಿಪ್ಲೇಸ್ಮೆಂಟೇ ಭಾರತದಲ್ಲೇ ಇಲ್ಲ. ಹೌದು, ಆಲ್ರೌಂಡರ್ಗೆ ಮತ್ತೊಬ್ಬ ಆಲ್ರೌಂಡರ್ನನ್ನ ಆಯ್ಕೆ ಮಾಡಬೇಕಿತ್ತು. ಆದ್ರೆ ಪಾಂಡ್ಯ ಬದಲಿಗೆ ಆಯ್ಕೆಯಾಗಿದ್ದು ವೇಗದ ಬೌಲರ್ ಪ್ರಸಿದ್ಧ್ ಕೃಷ್ಣ. ಇನ್ನು ಪಾಂಡ್ಯ ಬದಲಿಗೆ ವಿಶ್ವಕಪ್ನಲ್ಲಿ ಆಡಿದ್ದು, ಬ್ಯಾಟ್ಸ್ಮನ್ ಸೂರ್ಯ. ಅಲ್ಲಿ ಪಾಂಡ್ಯ ಬದಲಿ ಆಡೋಕೆ ಭಾರತದಲ್ಲಿ ಮತ್ತೊಬ್ಬ ವೇಗದ ಬೌಲರ್ ಕಮ್ ಬ್ಯಾಟರ್ ಇಲ್ಲ ಅನ್ನುವಂತಾಯ್ತು. ಜೂನಿಯರ್ ಹಂತದಿಂದಲೇ ಆಲ್ರೌಂಡರ್ಗಳನ್ನ ಹುಟ್ಟು ಹಾಕುವ ಕೆಲಸ ಬಿಸಿಸಿಐ ಮಾಡಬೇಕಿದೆ.