ಮಹಾರಾಷ್ಟ್ರ: ನಾವು ಸಾಮಾನ್ಯವಾಗಿ ಚಿನ್ನವನ್ನು ಕತ್ತಿಗೆ ಹಾಕಿಕೊಳ್ಳುತ್ತೇವೆ. ಅದು ಅಲ್ಲದೆ ಸೀರೆಯಲ್ಲೂ ಸಹ ಚಿನ್ನದ ಲೇಪನ ಇರುವುದನ್ನೂ ನೋಡಿರುತ್ತೇವೆ. ಆದರೆ ಇಲ್ಲೊಬ್ಬ ವ್ಯಕ್ತಿ ವಿಶ್ವದ ಅತ್ಯಂತ ದುಬಾರಿ ಶರ್ಟ್ನ್ನು ಹೊಂದಿದ್ದಾರೆ. ಹೌದು ಮಹಾರಾಷ್ಟ್ರ ಮೂಲದ ಪ್ರಸಿದ್ಧ ಉದ್ಯಮಿ ಮತ್ತು ರಾಜಕಾರಣಿ ಪಂಕಜ್ ಪರಾಖ್ ಅವರಾದ್ದಾಗಿದೆ. ಈ ಶರ್ಟ್ ಸಿದ್ದ ಪಡಿಸುವಾಗ ಇದರ ಬೆಲೆ ಬರೋಬ್ಬರಿ 98,35,099 ರೂ. ಅಂತೆ. ತನ್ನ ಸ್ನೇಹಿತರಿಂದ ‘ಗೋಲ್ಡನ್ ಶರ್ಟ್ ಹೊಂದಿರುವ ಮನುಷ್ಯ’ ಎಂದು ಪ್ರೀತಿಯಿಂದ ಕರೆಯಲ್ಪಡುತ್ತಾರೆ.
ಪರಾಖ್ ಹಲವಾರು ಬೆಲೆಬಾಳುವ ವಸ್ತುಗಳನ್ನು ಹೊಂದಿದ್ದಾರೆ. ಅದರಲ್ಲಿ ಈ ಗೋಲ್ಡನ್ ಶರ್ಟ್ ಸಹ ಒಂದು. 4.10 ಕೆಜಿ ತೂಕದ ಗೋಲ್ಡನ್ ಶರ್ಟ್ ಈಗ ಬರೋಬ್ಬರಿ 1.30 ಕೋಟಿ ರೂ. ಮೌಲ್ಯದ್ದಾಗಿದೆ. ಪರಾಖ್ ಶ್ರೀಮಂತ ವಸ್ತುಗಳ ಸಂಗ್ರಹದ ಭಾಗವಾಗಿದೆ. 10 ಕೆಜಿ ತೂಕದ ಚಿನ್ನದ ಉಡುಪು, ಪರವಾನಗಿ ಪಡೆದ ರಿವಾಲ್ವರ್ನೊಂದಿಗೆ ಅವರ ನಡಿಗೆ ಎಲ್ಲರ ಗಮನ ಸೆಳೆಯುತ್ತದೆ. ಈ ಎಲ್ಲಾ ದುಬಾರಿ ವಸ್ತುಗಳನ್ನು ಖಾಸಗಿ ಭದ್ರತಾ ಸಿಬ್ಬಂದಿಗಳು ಸುರಕ್ಷಿತವಾಗಿ ನಿರ್ವಹಿಸುತ್ತಾರೆ.
Post Office Jobs: 10ನೇ ತರಗತಿ ಪಾಸಾಗಿದ್ರೆ ಸಾಕು ಇಲ್ಲಿದೆ ಉದ್ಯೋಗಾವಕಾಶ.! ತಿಂಗಳಿಗೆ ಕೈ ತುಂಬಾ ಸಂಬಳ
ಈ ದುಬಾರಿ ಶರ್ಟ್ನ್ನು ನಾಸಿಕ್ನ ಬಫ್ನಾ ಜ್ಯುವೆಲ್ಲರ್ಸ್ವಿನ್ಯಾಸಗೊಳಿಸಿದೆ. ಮುಂಬೈನ ಶಾಂತಿ ಜ್ಯುವೆಲ್ಲರ್ಸ್ ರಚಿಸಿದೆ. 20 ಆಯ್ದ ಕುಶಲಕರ್ಮಿಗಳ ತಂಡವು ಎರಡು ತಿಂಗಳುಗಳಲ್ಲಿ 3,200 ಗಂಟೆಗಳ ಕಾಲ ಸಮಯ ತೆಗೆದುಕೊಂಡು ಈ ಎಕ್ಸ್ಪೆನ್ಸಿವ್ ಶರ್ಟ್ನ್ನು ಸಿದ್ಧಪಡಿಸಿದ್ದಾರೆ. ಯಾವುದೇ ಕಾನೂನು ತೊಂದರೆಯನ್ನು ತಪ್ಪಿಸಲು ಈ ಶರ್ಟ್ ಖರೀದಿಯ ಬಗ್ಗೆ ಸಂಪೂರ್ಣವಾಗಿ ಬಿಲ್ ಮಾಡಲಾಗಿದೆ. 47 ವರ್ಷದ ಪರಾಖ್,
ತಾನು ವಿಶ್ವದ ಎಕ್ಸ್ಪೆನ್ಸಿವ್ ಶರ್ಟ್ ಹೊಂದಿರುವುದಕ್ಕೆ ಸಂತಸ ವ್ಯಕ್ತಪಡಿಸಿದ್ದಾರೆ. ‘ನಾನು ಮಹಾರಾಷ್ಟ್ರದ ಸಣ್ಣ ಹಳ್ಳಿಯಿಂದ ಬಂದವನು. ನನ್ನ ಈ ಸಾಧನೆಯು ನನ್ನ ಹೆಸರನ್ನು ಇಡೀ ಜಗತ್ತಿಗೆ ತಲುಪಿಸಿದೆ. ಇದು ನನಗೆ ತುಂಬಾ ಸಂತೋಷವನ್ನುಂಟು ಮಾಡಿದೆ’ ಎಂದು ತಿಳಿಸಿದ್ದಾರೆ. ಪರಾಖ್ ಬಳಿ ಚಿನ್ನದ ಗಡಿಯಾರ, ಹಲವಾರು ಚಿನ್ನದ ಸರಗಳು, ದೊಡ್ಡ ಚಿನ್ನದ ಉಂಗುರಗಳು, ಚಿನ್ನದ ಮೊಬೈಲ್ ಕವರ್ ಮತ್ತು ಚಿನ್ನದ ಚೌಕಟ್ಟಿನ ಕನ್ನಡಕಗಳ ಸಂಗ್ರಹವೂ ಇದೆ.