ವೈವಾಹಿಕ ಜೀವನದಲ್ಲಿ ಸೆಕ್ಸ್ ಅನ್ನೋದು ತುಂಬಾನೆ ಮುಖ್ಯ. ಲೈಂಗಿಕ ಕ್ರಿಯೆಯ ಸಂದರ್ಭದಲ್ಲಿ ಬೇರೆ ಬೇರೆ ರೀತಿಯಲ್ಲಿ ನೋವು ಉಂಟಾಗುವುದು ಸಾಮಾನ್ಯ, ಆದರೆ ಈ ನೋವು ನಿಮ್ಮ ಲೈಂಗಿಕ ಸಂತೋಷದ ಮೇಲೆ ಪರಿಣಾಮ ಬೀರಲು ಪ್ರಾರಂಭಿಸಿದರೆ ಅದು ಸಾಮಾನ್ಯವಲ್ಲ. ಲೈಂಗಿಕ ಕ್ರಿಯೆ ವೇಳೆ ನೋವು ಇದ್ದರೆ ಆಗ ಇದನ್ನು ಹಾಗೆ ಅನುಭವಿಸಬೇಕಾಗಿಲ್ಲ. ಈ ಸ್ಥಿತಿಗೆ ಹಲವಾರು ಆರೋಗ್ಯ ಪರಿಸ್ಥಿತಿಗಳು ಕಾರಣವಾಗಬಹುದು. ಅಂತಹ ಪರಿಸ್ಥಿತಿಯಲ್ಲಿ, ಸಮಯಕ್ಕೆ ಸರಿಯಾಗಿ ಅವುಗಳ ಬಗ್ಗೆ ಗಮನ ಹರಿಸುವುದು ಮುಖ್ಯ, ಇದರಿಂದ ಪರಿಸ್ಥಿತಿ ಹೆಚ್ಚು ಗಂಭೀರವಾಗುವುದಿಲ್ಲ.
ಮುಂದೊಗಲಿನ ಸಮಸ್ಯೆ
ಸುನ್ನತಿ ಆಗದೆ ಇರುವಂತಹ ಪುರುಷರಲ್ಲಿ ಹೆಚ್ಚಾಗಿ ಮುಂದೊಗಲು ಬಿಗಿಯಾಗಿರುವ ಸಮಸ್ಯೆಯು ಕಂಡುಬರುವುದು.
ಮುಂದೊಗಲು ಬಿಗಿಯಾಗಿರುವ ವೇಳೆ ಅದನ್ನು ಹಿಂದಕ್ಕೆ ಎಳೆದಾಗ ಅದಕ್ಕೆ ಗಾಯವಾಗಬಹುದು, ರಕ್ತಬರಬಹುದು ಮತ್ತು ಅದರಿಂದ ನೋವು ಉಂಟಾಗಬಹುದು. ಇದಕ್ಕೆ ಕೆಲವೊಂದು ಮಲಾಮ್ ಹಚ್ಚಿಕೊಂಡು ಸರಿಪಡಿಸಬಹುದು. ಅಗತ್ಯವೆನಿಸಿದರೆ ಆಗ ನೀವು ವೈದ್ಯರ ನೆರವು ಪಡೆಯಿರಿ.
ಶಿಶ್ನದ ಗಾಯ
ಲೈಂಗಿಕವಾಗಿ ಹರಡಿದ ರೋಗದ ಹೊರತಾಗಿ ಶಿಶ್ನದಲ್ಲಿ ಬೆಳೆಯುವಂತಹ ಕೆಲವೊಂದು ರೀತಿಯ ಗಡ್ಡೆಗಳು ಶಿಶ್ನದ ಕ್ಯಾನ್ಸರ್ ಗೆ ಕಾರಣವಾಗಬಹುದು. ಕಲ್ಲಿನಂತಹ ಒಂದು ಪದರವು ನಿರ್ಮಾಣವಾಗಿ ಅದರಿಂದ ಕೂಡ ನೋವು ಉಂಟಾಗಬಹುದು.
ಅಲರ್ಜಿ
ಯೋನಿಯ ದ್ರವ ಅಥವಾ ಗರ್ಭನಿರೋಧಕಗಳಲ್ಲಿ ಇರುವಂತಹ ಕೆಲವೊಂದು ರೀತಿಯ ರಾಸಾಯನಿಕಗಳಿಂದಾಗಿ ಕೆಲವು ಪುರುಷರಿಗೆ ಅಲರ್ಜಿಯು ಉಂಟಾಗಬಹುದು. ಲ್ಯಾಟೆಕ್ಸ್ ಅಥವಾ ಬೇರೆ ಗರ್ಭನಿರೋಧಕದಿಂದಾಗಿ ಅಲರ್ಜಿ ಉಂಟಾಗಿರಬಹುದು ಎನ್ನುವುದನ್ನು ವೈದ್ಯರು ಹೇಳಬಹುದು.
ಚರ್ಮದ ಸಮಸ್ಯೆ
ಅಲರ್ಜಿ ಉಂಟು ಮಾಡದೆ ಇರುವಂತಹ ಸಮಸ್ಯೆಗಳಾಗಿರುವಂತಹ ಝೂನ್ ಬಾಲನೈಟಿಸ್, ಶಿಶ್ನದ ಸೋಂಕು ಇತ್ಯಾದಿಗಳು ಲೈಂಗಿಕ ಕ್ರಿಯೆ ವೇಳೆ ನೋವಿಗೆ ಕಾರಣವಾಗಬಹುದು.
ವೈದ್ಯರನ್ನು ಭೇಟಿ ಮಾಡುವುದು ಯಾವಾಗ?
ಲೈಂಗಿಕ ಕ್ರಿಯೆ ವೇಳೆ ನೋವು ಕಂಡುಬರುತ್ತಲಿದ್ದರೆ ಆಗ ನೀವು ವೈದ್ಯರನ್ನು ಸಂಪರ್ಕಿಸುವುದು ಅತೀ ಅಗತ್ಯ. ಚಿಕಿತ್ಸೆ ಪಡೆಯದೆ ನೀವು ಲೈಂಗಿಕ ಕ್ರಿಯೆಯಲ್ಲಿ ತೊಡಗಿಕೊಳ್ಳಲು ಹೋಗಬೇಡಿ. ಸೋಂಕಿನಿಂದಾಗಿ ಹೀಗೆ ಆಗಿದ್ದರೆ ಆಗ ನೀವು ಖಂಡಿತವಾಗಿಯೂ ಚಿಕಿತ್ಸೆ ಪಡೆಯುವುದು ಅತೀ ಅಗತ್ಯ.
ಆಪ್ತ ಸಲಹೆ
ಇಂತಹ ಕೆಲವೊಂದು ಸಮಸ್ಯೆಗಳ ಬಗ್ಗೆ ಚರ್ಚೆ ಮಾಡಲು ಪ್ರತಿಯೊಬ್ಬರು ಹಿಂಜರಿಯುವರು. ಆದರೆ ಖಂಡಿತವಾಗಿಯೂ ವೈದ್ಯರ ಮುಂದೆ ಇದನ್ನು ತೋರಿಸುವುದು ಅತೀ ಅಗತ್ಯ. ಇಲ್ಲವಾದಲ್ಲಿ ಇದು ಮುಂದೆ ದೊಡ್ಡ ಸಮಸ್ಯೆಗೆ ಕಾರಣವಾಗಿ ಪ್ರಾಣಕ್ಕೂ ಹಾನಿ ಉಂಟು ಮಾಡಬಹುದು.