ಶಿವಮೊಗ್ಗ : ಮದುವೆ ಮನೆಯಾಯ್ತು ರಕ್ತದಾನ ಶಿಬಿರ. ಹೌದು, ನಿನ್ನೆ ಸೋಮವಾರ ನಡೆದಿರುವ ಮದುವೆ ಕಾರ್ಯದಲ್ಲಿ, ಮಧುಮಕ್ಕಳಾದ ಯಶವಂತ್ ಹಾಗೂ ತನುಜಾ ರಕ್ತದಾನ ಮಾಡುವ ಮೂಲಕ ಈ ಬಗ್ಗೆ ಜಾಗೃತಿ ಮೂಡಿಸಿ ಎಲ್ಲರಿಗೂ ಮಾದರಿಯಾಗಿದ್ದಾರೆ.
ಶಿವಮೊಗ್ಗದ ಗುಡ್ಡೇಕಲ್ ಸಮುದಾಯ ಭವನದಲ್ಲಿ ಈ ಮದುವೆ ನಡೆದಿದ್ದು, ಹುಡುಗ ಮತ್ತು ಹುಡುಗಿ ಮನೆಯವರಿಗೆ ಒಪ್ಪಿಸಿ ರಕ್ತದಾನ ಶಿಬಿರ ಆಯೋಜಿಸಲಾಗಿತ್ತು.
ಮದುವೆಯ ದಿನದಂದೇ ರಕ್ತದಾನ ಮಾಡುವ ವಿಶೇಷ ಕಾರ್ಯಕ್ರಮದ ಮೂಲಕ ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಲಾಯಿತು. ಸಂತೋಷದಿಂದ ಪುಣ್ಯದ ಕಾರ್ಯ ನಡೆಸಿರುವ ಎರಡು ಮನೆಯವರು, ಬೇರೆ ಸುಶಿಕ್ಷಿತ ಕುಟುಂಬಗಳಿಗೆ ಮಾದರಿಯಾದರು.
ಮದುವೆಗೆಂದು ನೆರೆದಿದ್ದ ಅಪಾರ ಜನ ಸಮುದಾಯದ ನಡುವೆ, ತಾಳಿ ಕಟ್ಟುವ ಕಾರ್ಯ ಮುಗಿಯುತ್ತಿದ್ದಂತೆ ನವ ದಂಪತಿಗಳಿಂದ ಮಂಟಪದಲ್ಲಿಯೇ ಬಹಳ ಖುಷಿಯಿಂದ ರಕ್ತದಾನ ಮಾಡಿದ್ರು. ಜೀವನ ಸಾರ್ಥಕವೆನಿಸಿದ ಧನ್ಯತಾ ಭಾವ ವ್ಯಕ್ತಪಡಿಸಿ, ಇತರೆ ಜೋಡಿಗಳಿಗೆ ಈ ಜೋಡಿ ಮಾದರಿಯಾದರು. ಇನ್ನು ಈ ಮದುವೆ ಮನೆಯಲ್ಲಿ ಪಾಲ್ಗೊಂಡಿದ್ದ ಕೆಲವರು ಕೂಡ ರಕ್ತದಾನ ಮಾಡಿ, ನವಜೋಡಿಗಳಿಗೆ ಶುಭ ಹಾರೈಸಿದ್ರು