ಬೆಂಗಳೂರು;- ಮೂವರು ಡಿಸಿಎಂ ಬೇಡಿಕೆಗೆ ಮುಖ್ಯಮಂತ್ರಿಯೇ ಉತ್ತರ ಕೊಡಬೇಕು ಎಂದು DCM DK ಶಿವಕುಮಾರ್ ಹೇಳಿದ್ದಾರೆ.
ಈ ಸಂಬಂಧ ಮಾತನಾಡಿದ ಅವರು, ಸಚಿವ ಕೆ ಎನ್ ರಾಜಣ್ಣ ಹೇಳಿರುವಂತೆ ಮೂವರು ಡಿಸಿಎಂ ಬೇಡಿಕೆ ಸಂಬಂಧ ಮುಖ್ಯಮಂತ್ರಿಗಳೇ ಇದಕ್ಕೆಲ್ಲಾ ಉತ್ತರ ಕೊಡಬೇಕು. ಎಲ್ಲರ ಮನಸ್ಸಿಗೂ ಸಮಾಧಾನ. ನನ್ನನ್ನು ಡಿಸಿಎಂ ಆಗಿ ನೇಮಕ ಮಾಡಿರುವುದು ಮುಖ್ಯಮಂತ್ರಿಗಳು ಮತ್ತು ಗವರ್ನರ್. ಇದಕ್ಕೆಲ್ಲಾ ಮುಖ್ಯಮಂತ್ರಿಗಳೇ ಉತ್ತರ ಕೊಡಬೇಕು ಎಂದು ತಿಳಿಸಿದರು.

ಕಾಂಗ್ರೆಸ್ನಲ್ಲಿನ ಬಣ ವಿಚಾರವಾಗಿ ಮಾತನಾಡಿ, ನಿಮ್ಮ ಹತ್ತಿರ ಬಣ ಇರಬಹುದು. ನಾನು ರಾಜಕೀಯ ಜೀವನದಲ್ಲಿ ಯಾವುದೇ ಬಣಕ್ಕೆ ಬೆಂಬಲ ಕೊಟ್ಟಿಲ್ಲ. ನನಗೆ ಬಣದ ಅವಶ್ಯಕತೆ ಇಲ್ಲ. ಬಣ ಮಾಡಬೇಕಾದರೆ ಎಸ್‌ಎಂ ಕೃಷ್ಣ ಕಾಲದಲ್ಲಿ, ಬಂಗಾರಪ್ಪ ಅವರ ಕಾಲದಲ್ಲೂ ನನಗೆ ಬಣ ಮಾಡುವ ಶಕ್ತಿ ಇತ್ತು. ಆದರೆ ನನಗೆ ಒಂದೇ ಒಂದು ಬಣ ಇರುವುದು, ಅದು ಕಾಂಗ್ರೆಸ್ ಬಣ ಎಂದು ಡಿಕೆಶಿ ಸ್ಪಷ್ಟಪಡಿಸಿದರು.
ಯಾರು ಮಾತನಾಡಿದರೂ ಅವರ ಸ್ಥಾನಮಾನಕ್ಕೆ ತಕ್ಕಂತೆ ಮಾತನಾಡಬೇಕು. ಈಗ ರಾಜಣ್ಣ ಮಾತನಾಡಿದ್ದಾರೆ, ಅವರು ಮುಖ್ಯಮಂತ್ರಿಗಳ ಬಳಿ ಉತ್ತರ ಕೇಳಬೇಕಾಗಿರುವುದು. ಬಿ ಕೆ ಹರಿಪ್ರಸಾದ್ಗೆ ಉತ್ತರ ಹೇಳಬೇಕಾಗಿರುವುದು ಕಾಂಗ್ರೆಸ್ ಹೈಕಮಾಂಡ್. ಸಂವಿಧಾನದ ಪುಸ್ತಕ ಇದೆ. ನಾನು ನಿಮಗೆ ಕಳಿಸಿಕೊಡುತ್ತೇನೆ. ಯಾರು ಯಾರನ್ನು ಕೇಳಬೇಕು. ಯಾರು ಯಾರಿಗೆ ಉತ್ತರ ಕೇಳಬೇಕು ಎಂದು ಇದೆ. ಅವರು ಯಾರನ್ನು ಕೇಳ್ತಾರೆ ಕೇಳಲಿ. ನಾನು ಯಾರನ್ನು ಕೇಳಬೇಕು ಕೇಳ್ತೀನಿ. ಮುಲಾಜಿಲ್ಲದೆ ಕೇಳುತ್ತೇನೆ ಎಂದು ತಿಳಿಸಿದರು.
