ಹುಬ್ಬಳ್ಳಿ:- ಇತ್ತೀಚೆಗೆ ದಿನಗಳಲ್ಲಿ ಲವ್ ಅನ್ನೋದು ಯಾರ ಮೇಲಾಗುತ್ತೋ ಗೊತ್ತಾಗುವುದಿಲ್ಲ ಮರ್ರೆ. ಒಂದೆಡೆ 25, 26 ವರ್ಷದ ಯುವಕರಿಗೆ ಹುಡುಗಿ ಸಿಗದೆ ವಧುಗಾಗಿ ಹುಡುಕಾಡ್ತಿದ್ದಾರೆ. ಆದರೆ ಕೆಲವು ಅಂಕಲ್ ಗಳಿಗೆ ಬಯಸದೆ ಬಂದ ಭಾಗ್ಯ ಎಂಬಂತೆ ಚಿಕ್ಕ ಚಿಕ್ಕ ಹುಡುಗಿಯರೇ ಲವ್ ಮಾಡ್ತಿದ್ದಾರೆ.
ಗ್ಯಾರಂಟಿಗೆ ಮೀಸಲಿಟ್ಟ ಹಣ ಏನಾಗುತ್ತಿದೆ!? ಛಲವಾದಿ ನಾರಾಯಣಸ್ವಾಮಿ ಪ್ರಶ್ನೆ!
ಅದರಂತೆ ಇಲ್ಲೋರ್ವ 50 ವರ್ಷದ ಅಂಕಲ್ ನನ್ನು 18 ವರ್ಷದ ಹುಡುಗಿ ಪ್ರೀತಿಸಿ ಮದುವೆ ಆಗಿದ್ದಾರೆ. ಹುಬ್ಬಳ್ಳಿಯಿಂದ ಕೊಲ್ಲಾಪುರದ ಅಜ್ಜಿ ಮನೆಗೆ ಹೋಗುವುದಾಗಿ ನಾಪತ್ತೆಯಾಗಿದ್ದ 18 ವರ್ಷದ ಯುವತಿ ಇದೀಗ 50 ವರ್ಷದ ವ್ಯಕ್ತಿ ಜೊತೆಗೆ ಮದುವೆಯಾಗಿದ್ದಾಳೆ.
ಕೆಲವು ದಿನಗಳ ಹಿಂದೆ ನಾಪತ್ತೆಯಾಗಿದ್ದ ಕರೀಷ್ಮಾ ಹಾಗೂ ಪ್ರಕಾಶ್ ಮದುವೆಯಾಗಿದ್ದಾರೆ. ಯುವತಿ ಕರೀಷ್ಮಾಳನ್ನ ಮದುವೆಯಾಗಿರುವ ಪೋಟೋವನ್ನು ಪ್ರಕಾಶ್ ವಾಟ್ಸಪ್ ಸ್ಟೇಟಸ್ ಹಾಕಿಕೊಂಡಿದ್ದಾರೆ. ಇದರಿಂದ ಶಾಕ್ ಆದ ಪೋಷಕರು ನಮ್ಮ ಮಗಳ ತಲೆಕೆಡಿಸಿ ಮದುವೆಯಾಗಿದ್ದಾನೆಂದು ಆರೋಪಿಸಿದ್ದಾರೆ.
ಅಜ್ಜಿ ಮನೆಗೆ ಹೋಗಿದ್ದ ಕರೀಷ್ಮಾ ದಿಢೀರ್ ನಾಪತ್ತೆ ಆಗಿದ್ದಳು. ನಾಪತ್ತೆಯಾದ ಮಗಳನ್ನು ಹುಡುಕಿಕೊಡುವಂತೆ ಪಾಲಕರು ಕಣ್ಣೀರು ಹಾಕಿದ್ದರು. ಅಲ್ಲದೇ ಮಗಳ ಫೋಟೋ ಹಿಡಿದು ರಸ್ತೆ ರಸ್ತೆಗಳಲ್ಲಿ ಅಲೆದಾಡಿ ಹುಡುಕಿಕೊಡಿ ಎಂದು ಪೊಲೀಸರು, ಮಾಧ್ಯಮಗಳು ಸೇರಿದಂತೆ ಕಂಡ ಕಂಡವರ ಮುಂದೆ ಮನವಿ ಮಾಡುತ್ತಿದ್ದರು. ಆದ್ರೆ, ಇದೀಗ ಕರೀಷ್ಮಾ ಪ್ರಕಾಶನ ಜೊತೆ ಮದುವೆಯಾಗಿರುವುದು ಬೆಳಕಿಗೆ ಬಂದಿದೆ. ಸೆಕ್ಯೂರಿಟಿ ಕೆಲಸ ಮಾಡುತ್ತಿರುವ 50 ವರ್ಷದ ಪ್ರಕಾಶ್ಗೆ ಈಗಾಗಲೇ ಮದುವೆಯಾಗಿ ಎರಡು ಮಕ್ಕಳೂ ಸಹ ಇವೆ. ಇದರ ಬೆನ್ನ್ಲಲೇ ಇದೀಗ 18 ವರ್ಷದ ಕರೀಷ್ಮಾ ಎನ್ನುವ ಯುವತಿಯನ್ನು ಸಹ ಮದುವೆಯಾಗಿದ್ದಾರೆ. ದೇವಸ್ಥಾನದಲ್ಲಿ ಕರೀಷ್ಮಾಳ ಜೊತೆ ಮದುವೆಯಾಗಿರುವ ಫೊಟೋವನ್ನು ಪ್ರಕಾಶ್ ಸ್ಟೇಟಸ್ ಹಾಕಿಕೊಂಡಿದ್ದಾರೆ
ಕರೀಷ್ಮಾ ಹಾಗೂ ಪ್ರಕಾಶ ಈ ಮೊದಲೇ ಪ್ರೀತಿ, ಪ್ರೇಮ ಅಂತ ಇದ್ದರು. ಮದುವೆಯಾಗಿ ಎರಡು ಮಕ್ಕಳಿರುವ ಆರೋಪಿ ಪ್ರಕಾಶ್, 2 ವರ್ಷದ ಹಿಂದೆಯೇ ಕರೀಷ್ಮಾಳನ್ನಪ್ರೀತಿಸುತ್ತಿದ್ದ. ಆಗ ಕರೀಷ್ಮಾ ಅಪ್ರಾಪ್ತೆಯಾಗಿದ್ದಳು. ಇದಕ್ಕೆ ಹುಡುಗಿಯ ಮನೆಯವರು ಆಕ್ಷೇಪ ವ್ಯಕ್ತಪಡಿಸಿ, ಆಕೆಯ ಮನಃ ಪರಿವರ್ತನೆ ಮಾಡಲು ಮುಂದಾಗಿದ್ದರು. ಅಷ್ಟೇ ಅಲ್ಲದೆ, ಆರೋಪಿಯ ವಿರುದ್ಧ ದೂರು ನೀಡಿದ್ದರು. ಇದರಂತೆ ಪ್ರಕಾಶನ ವಿರುದ್ಧ ಪೋಕ್ಸೋ ಕಾಯ್ದೆ ಅಡಿ ಪ್ರಕರಣ ದಾಖಲಿಸಲಾಗಿತ್ತು.ಬಳಿಕ ಹುಬ್ಬಳ್ಳಿಯಲ್ಲಿಯೇ ಇದ್ದರೆ ಸಮಸ್ಯೆ ಆಗುತ್ತದೆ ಎಂದು ಹುಡುಗಿಯನ್ನು ಮನೆಯವರು ಮಹಾರಾಷ್ಟ್ರದ ಕೊಲ್ಲಾಪುರದಲ್ಲಿ ಇರುವ ಅಜ್ಜಿ ಮನೆಯಲ್ಲಿ ಬಿಟ್ಟಿದ್ದರು.
ಅಂದಿನಿಂದ ಆಕೆ ಅಲ್ಲಿಯೇ ವಾಸವಾಗಿದ್ದಳು. ಆದರೆ ಆಕೆ, ಜನವರಿ 3 ರಂದು ಅಲ್ಲಿಂದ ನಾಪತ್ತೆಯಾಗಿದ್ದಳು. ಆ ಬಳಿಕ ಆಕೆಯ ಬಗ್ಗೆ ಯಾವುದೇ ಮಾಹಿತಿ ದೊರೆತಿರಲಿಲ್ಲ. ಆರೋಪಿ ಪ್ರಕಾಶನೇ ಆಕೆಯನ್ನು ಅಪಹರಿಸಿಕೊಂಡು ಹೋಗಿದ್ದಾನೆ ಎಂದು ಕುಟುಂಬಸ್ಥರು ಆರೋಪಿಸಿದ್ದರು.
ಇದೀಗ ಕರೀಷ್ಮಾಗೆ 18 ವರ್ಷ ತುಂಬಿದ್ದರಿಂದ ಮದುವೆ ಮಾಡಿಕೊಂಡು ಪ್ರಕಾಶನ ಜೊತೆಯಲ್ಲೇ ಇರುವುದು ಗೊತ್ತಾಗಿದೆ.